

ವಿಜಯನಗರ ಜಿಲ್ಲೆ ಕೊಟ್ಟೂರು : ಶ್ರೀಕ್ಷೇತ್ರ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಫೇ 22 ರಂದು ಜರುಗಲಿದ್ದು, ತನ್ನಿಮ್ಮಿತ್ತ ಜ29ರಂದು ಪೂರ್ವಭಾವಿ ಸಭೆಯು, ಜಿಲ್ಲಾಧಿಕಾರಿಗಳಾದ ದಿವಾಕರ್ ಹಾಗೂ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ನೇತೃತ್ವದಲ್ಲಿ ಜರುಗಿತು.
ಜಿಲ್ಲಾಧಿಕಾರಿಗಳಾದ ದಿವಾಕರವರು ಮಾತನಾಡಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಸ್ಸರುಲ್ಲಾ ರವರ ಕುರಿತು ಸ್ವಚ್ಛತೆ ಹಾಗೂ ಬರುವಂತಹ ಭಕ್ತಾದಿಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಪೊಲೀಸ್ ಇಲಾಖೆಯವರು ಜನ ದಟ್ಟಣೆ ಹಾಗೂ ವಾಹನ ದಟ್ಟಣೆ ನಿಯಂತ್ರಿಸಲು, ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕಿದೆ. ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಹೆಚ್ಚಚ್ಚು ಬ್ಯಾರಿಕೇಡ್ ಗಳನ್ನು ಅಗತ್ಯವಿರುವೆಡೆಗಳಲ್ಲಿ ಹಾಕಬೇಕಿದೆ. ಭಕ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ, ಹಾಗೂ ಅನಾಹುತಗಳಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಂದು ಇಲಾಖಾಧಿಕಾರಿಗೆ ಸಲಹೆ ನೀಡಿದರು.
ವಿದ್ಯುತ್ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳಿಗೆ, ಹಲವು ಜವಾಬ್ದಾರಿಗಳನ್ನು ನೀಡುವ ಮೂಲಕ. ಹಲವು ಇಲಾಖೆಗಳ ಅಧಿಕಾರಿಗಳ ಹೆಗಲಿಗೆ, ಕೆಲ ಗುರುತರವಾದ ಜವಾಬ್ದಾರಿಗಳನ್ನು ಜಿಲ್ಲಾಧಿಕಾರಿಗಳು ವಹಿಸಿದರು. ರಥೋತ್ಸವ ಸಾಂಗವಾಗಿ ವಿಜೃಂಭಣೆಯಿಂದ ಜರುಗುವುದಕ್ಕೆ, ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ. ಅವರು ಪ್ರಮುಖ ಸಲಹೆ ಸೂಚನೆಗಳನ್ನು ಸಭೆಗೆ ನೀಡಿದರು. ರಥೋತ್ಸವ ಹಾಗೂ ಜಾತ್ರೆಗೆ ಸಂಭಂದಿಸಿದಂತೆ, ಅನೇಕ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ತಹಶಿಲ್ದಾರರಾದ ಜಿ.ಕೆ. ಅಮರೇಶ, ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ರೇಖಾ ರಮೇಶ್. ಉಪಾದ್ಯಕ್ಷರಾದ ಸಿದ್ದಯ್ಯ ಹಾಗೂ ವಿವಿದ ಸದಸ್ಯರು. ದೇವಸ್ಥಾನದ ಕ್ರಿಯಾಮೂರ್ತಿ ಪ್ರಕಾಶ್ ಸ್ವಾಮಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ಸೇರಿದಂತೆ ವಿವಿದ ಇಲಾಖಾಧಿಕಾರಿಗಳು ಹಾಜರಿದ್ದರು. ಧರ್ಮಕರ್ತರಾದ ಶೇಖರಯ್ಯ. ಕಟ್ಟೆಮನೆ ದೈವಸ್ಥರು ಮತ್ತು ಪಟ್ಟಣದ ಹಿರಿಯ ನಾಗರೀಕರು, ಭಕ್ತರು, ಪ್ರಮುಖರು, ದೈವಸ್ಥರು, ಪಟ್ಟಣದ ಪ್ರಮುಖರು, ಗಣ್ಯರು ಊಪಸ್ಥಿತರಿದ್ದರು.