ಶಿವ ಶರಣರ ತತ್ವಾದರ್ಶ ಅನುಸರಿಸಿದರೆ ಬದುಕು ಸಾರ್ಥಕ ,,ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿ,,

ಬಸವಾದಿ ಶಿವಶರಣರ ತತ್ವ, ಸಂದೇಶ ಅಳವಡಿಸಿಕೊಂಡು ನಡೆದರೆ ನಮ್ಮ ಬದುಕು ಸಾರ್ಥಕತೆ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿ ಅಭಿಮತ ವ್ಯಕ್ತಪಡಿಸಿದರು.

ಅವರು ಪಟ್ಟಣದ ಗಚ್ಚಿನಮಠದಲ್ಲಿ ಇಂದು ಆಯೋಜಿಸಿದ್ದ ಕಾಯಕಯೋಗಿ ಶಿವಶರಣ ಶ್ರೀ ನೂಲಿ ಚಂದಯ್ಯ ನವರ 916ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂತರು, ಶರಣರು, ಸ್ವಾಮೀಜಿಗಳಿಂದ ನಮ್ಮ ದೇಶವು ಅಧ್ಯಾತ್ಮಿಕ ಶ್ರೀಮಂತಿಕೆ ಹೊಂದಿದ ಪುಣ್ಯ, ಪಾವನ ಭೂಮಿಯಾಗಿದೆ. ನೂಲಿಯ ಚಂದಯ್ಯನವರಂತಹ ಶರಣರ, ಸಂತರ ಪ್ರವಚನ, ವಚನ ಸಂದೇಶಗಳನ್ನು ಆಲಿಸುವುದರಿಂದ, ಪಾಲಿಸುವುದರಿಂದ ನೆಮ್ಮದಿಯುತ ಬದುಕು ಕಾಣಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಅಧ್ಯಾತ್ಮಿಕತೆಯ ಅಗತ್ಯವಿದೆ ಎಂದು ಹೇಳಿದರು.
ಭಜಂತ್ರಿ ಸಮುದಾಯದ ಬೇಡಿಕೆಯಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಿಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಮುರುಘರಾಜೇಂದ್ರ ಸ್ವಾಮೀಜಿಯವರು, ಸಿದ್ದ ಕಬೀರ ಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸಿದ್ಧಾರ್ಥ ಸಿಂಗೆ, ಶಿವು ಗುಡ್ಡಾಪುರ, ಮಹಾಂತೇಶ ಠಕ್ಕಣ್ಣವರ, ಸಂಜೀವ ಕಾಂಬಳೆ, ಹನಮಂತ ಭಜಂತ್ರಿ, ಅಣ್ಣಪ್ಪ ಭಜಂತ್ರಿ, ಸಿದರಾಯ ಭಜಂತ್ರಿ,
ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಯಂತ್ಯುತ್ಸವದಲ್ಲಿ ಹಲವು ಗಣ್ಯಮಾನ್ಯರು, ಗುರುಹಿರಿಯರು, ಭಜಂತ್ರಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು

  • Related Posts

    ದೇವಸ್ಥಾನದ  ಕಾಮಗಾರಿಗೆ  25 ಲಕ್ಷ  ಹಣ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್…

    ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು.  ಈ  ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್  ಗೌರವ-ಸನ್ಮಾನ…

    ಅಥಣಿಯಲ್ಲಿ ಶ್ರೀ ಲಕ್ಷ್ಮಣ ಸವದಿ ಪಾರ್ಕ್ ಹಾಗೂ ವೃತ್ತದ ಉದ್ಘಾಟನೆ…

    ಈ ವೇಳೆ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ,ಪೂ,ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ,ಶ್ರೀ ಶಿವಾನಂದ ದಿವಾನಮಳ,ಸಂಕೋನಟ್ಟಿ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!