

ಕನಕಪುರ (ಸೆ.15): ಸ್ವಚ್ಛತೆ ಒಂದು ಅಭ್ಯಾಸ ಮತ್ತು ಸಾಮಾಜಿಕ ಜವಾಬ್ದಾರಿಯೂ ಹೌದು. ಸಾಮೂಹಿಕ ಪ್ರಯತ್ನದಿಂದ ಮಾತ್ರ ಅದನ್ನು ಸಂಪೂರ್ಣವಾಗಿ ತರಬೇಕು. ವೈಯಕ್ತಿಕವಾಗಿ ಸ್ವಚ್ಛವಾಗಿರುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ ಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ರಾಮನಗರ, ತಾಲ್ಲೂಕು ಪಂಚಾಯತ್ ಕನಕಪುರ ಹಾಗೂ ಶಿವನಹಳ್ಳಿ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರವರೆಗೂ ಗಾಂಧಿ ಜಯಂತಿ ಅಂಗವಾಗಿ #ಸ್ವಚ್ಛತೆಯ ಸೇವೆ# ಎಂಬ ಅಭಿಯಾನ ಮತ್ತು ತಾಜ್ಯ ನಿರ್ವಹಣೆಯ ಕುರಿತ ತರಬೇತಿ ಕಾರ್ಯಾಗಾರವನ್ನು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ. ಉ) ಮೋಹನ್ ಬಾಬು ಅವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತೆಯ ಮೊದಲ ಹಂತವೆಂದರೆ ತನ್ನನ್ನು ತಾನು ಸ್ವಚ್ಛವಾಗಿಟ್ಟುಕೊಳ್ಳುವುದು, ಸ್ವಚ್ಛತೆಯ ಎರಡನೇ ಹಂತವೆಂದರೆ ಮನೆ, ಶಾಲೆ, ಉದ್ಯಾನ, ಬೀದಿ, ನೆರೆಹೊರೆ ಮತ್ತು ಇಡೀ ದೇಶ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳುವುದು. ವಿಪರೀಮಿತವಾದ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದ್ದು, ಪ್ಲಾಸ್ಟಿಕ್ ಬಳಸದಿರುವ ಕುರಿತು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಾಗಿದೆ. ಹಾಗೆಯೇ ಅಂಗಡಿ, ಮಾಲ್ ಗಳಿಗೆ ಹೋಗುವಾಗ ಸ್ವಯಂ ಪ್ರೇರಿತವಾಗಿ ಕೈ ಚೀಲವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಲು ಅವರು ಸೂಚಿಸಿದರು,
ಈ ಸಂದರ್ಭದಲ್ಲಿ ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹನುಮಂತ ನಾಯ್ಕ, ಸಂಪನ್ಮೂಲ ವ್ಯಕ್ತಿ ರೂಪೇಶ್ ಸಹಾಯಕ ನಿರ್ದೇಶಕರು (ಗ್ರಾ.ಉ)ರಾಮನಗರ ತಾಲ್ಲೂಕು ಪಂಚಾಯತ್, ಪಂ.ಅ. ಅಧಿಕಾರಿ ಕೃಷ್ಣ ಮೂರ್ತಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ದಿ ಅಧಿಕಾರಿಗಳು, ಜಿ.ಪಂ. ಎಸ್.ಬಿ.ಎಂ. ಸಂಯೋಜಕರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು..
ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು