


ಮೂಡುಬಿದಿರೆಯಲ್ಲಿ ” ಶ್ರೀ ಕೃಷ್ಣ ಜನ್ಮಾಷ್ಟಮಿ” ಪ್ರಯುಕ್ತ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಡೆದ “37 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮದ” ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ.ರವರು ಭಾಗವಹಿಸಿದರು. ಕಂಬಳ ಸಾಧಕ, ನಿವೃತ ಪ್ರಾಚಾರ್ಯರಾದ ಗುಣಪಾಲ ಕಡಂಬರಿಗೆ ಕೃಷ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.



ಈ ಸಂದರ್ಭ ಊರಿನ ಗಣ್ಯರಾಗಿರುವ ಶ್ರೀಪತಿ ಭಟ್, ರಾಘವೇಂದ್ರ ಪ್ರಭು, ಪ್ರಮತ್ ಕುಮಾರ್ ಜೈನ್, ರಾಜೇಂದ್ರ ಜೈನ್, ಸಮಿತಿಯ ಪ್ರಮುಖರಾದ ಸಂತೋಷ್ ಕುಮಾರ್,ಗಣೇಶ್ ರಾವ್, ಧನಂಜಯ ಉಪಸ್ಥಿತರಿದ್ದರು. ಖ್ಯಾತ ಗಾಯಕರಾದ ಪುತ್ತೂರು ಜಗದೀಶ ಆಚಾರ್ಯ ಬಳಗದರಿಂದ “ಭಕ್ತಿಗಾನ” ನಡೆಯಿತು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….