

೯-೯-೨೩, ಶ್ರಾವಣ ಮಾಸದ ಪ್ರಯುಕ್ತ ಇಂದು ಲಕ್ಷೀ ಹೆಬ್ಬಾಳಕರ್ ನಿವಾಸಕ್ಕೆ ಬೆಳಗಾವಿಯ ನಾಗನೂರ ಮಠದ ಶ್ರೀ ಮ.ನಿ.ಪ್ರ.ಸ್ವ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಹಳಂಗಲಿಯ ಶ್ರೀ ಶಿವಾನಂದ ಸ್ವಾಮಿಗಳು ಮತ್ತು ಕಿತ್ತೂರಿನ ಶ್ರೀ ಓಂಕಾರ ಗುರೂಜಿಗಳು ಆಗಮಿಸಿ, ಕುಟುಂಬದ ಎಲ್ಲ ಸದಸ್ಯರಿಗೆ ಆಶೀರ್ವದಿಸಿದರು.

ಶ್ರಾವಣ ಮಾಸ ಹಾಗೂ ಬಸವ ಜಯಂತಿಯ ಸಂದರ್ಭದಲ್ಲಿ ಶ್ರೀಗಳು ಬೆಳಗಾವಿ ನಗರ ಹಾಗೂ ಬೆಳಗಾವಿಯ ಸುತ್ತಮುತ್ತ ಪಾದಯಾತ್ರೆಯನ್ನು ಕೈಗೊಂಡು ಬಸವ ತತ್ವ, ಪ್ರವಚನ ಹಾಗೂ ಶರಣ ಸಂಸ್ಕ್ರತಿಯ ಮೂಲಕ ಜನರಲ್ಲಿ ಭಕ್ತಿ ಭಾವವನ್ನು ಪಸರಿಸುವುದು ವಿಶೇಷವಾಗಿದೆ.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….