
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಸರಕಾರಿ ಉರ್ದು ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ದಾವುದ ಆಸಂಗಿ ಅತಿಥಿಗಳಾಗಿ ಶ್ರೀ ಅಮೀರ್ ಅನ್ಸಾರಿ ಹಾಗೂ ಎ ಕೆ ಪ್ರೌಢಶಾಲೆಯ ಶಿಕ್ಷಕರಾದಂತ ಶ್ರೀ ಎಸ್ ಎ ಸಲಗರ ಶಾಲೆಯ ಪ್ರಧಾನ ಗುರುಗಳಾದ ಪಿ ಎ ಕೊರಬು ಉಪಸ್ಥಿತರಿದ್ದರು. ಶಾಲೆಯ ಮಕ್ಕಳು ಶಿಕ್ಷಕರಾಗಿ ಸಂತೋಷಪಟ್ಟರು.

ಶ್ರೀ ಸಿ ಆಯ್ ಮಗದುಮ್ಮ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ರವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಗೆ ದಾನ ನೀಡಿದ ಶ್ರೀ ಅಮೀರ್ ಅನ್ಸಾರಿ ಹಾಗೂ ಶ್ರೀ ಸಲಗರ್ ಸರ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಶ್ರೀ ವಸಿಮ ಜಗದಾಳ ಗುರುಗಳು ನೆರವೇರಿಸಿ ವಂದಿಸಿದರು. ಧನ್ಯವಾದಗಳು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….







