

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ, ರಾಯಬಾಗ ವಿಧಾನಸಭಾ ಕ್ಷೇತ್ರದ ಚಿಂಚಲಿ ಗ್ರಾಮದಲ್ಲಿ ಜೈ ಮಹಾಕಾಳಿ ಕ್ರೀಡಾ ಯುವಕ ಸಂಘದ ವತಿಯಿಂದ ಇಂದು ಕೈಗೊಂಡ ಅಂತರರಾಜ್ಯ ಮಟ್ಟದ ಮಹಿಳೆಯರ ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಕಬಡ್ಡಿ ಸಂಘದ ಅಧ್ಯಕ್ಷರಾದ ಶ್ರೀ ಪಾ.ಪಾ ಪಾಟೀಲ, ಕಾರ್ಯದರ್ಶಿಗಳಾದ ಶ್ರೀ ಸಂಜು ಮಸಾಲಜಿ, ಮುಖಂಡರಾದ ಶ್ರೀ ಅಂಕುಶ್ ಜಾಧವ, ಶ್ರೀ ಸುಭಾಷ ಕೋರೆ, ಶ್ರೀ ಮಲ್ಲಪ್ಪ ಕಮತೆ, ಶ್ರೀ ಮಹಾವೀರ ಹಾರೂಗೇರಿ, ಶ್ರೀ ಬಾಬುರಾವ ಈರಗಾರ, ಶ್ರೀ ನವೀನ ಪಟ್ಟೆಕರ, ಶ್ರೀ ಪ್ರಕಾಶ ಪಡೋಲಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
