ಕೇಳು ಓ ನನ್ನ ಪ್ರೇಯಸಿಯೇ,

ಹಸಿದವರಿಗೆ ಮಾಡು ಅನ್ನದಾನ

ಸಾಯುವವರಿಗೆ ಮಾಡು ರಕ್ತದಾನ

ಸತ್ತ ಮೇಲೆ ಮಾಡು ದೇಹದಾನ

ಮೂಢರಿಗೆ ಮಾಡು ವಿದ್ಯಾದಾನ

ಸ್ನೇಹಿತರಿಗೆ ಮಾಡು ಜೀವದಾನ…

ಕುರುಡರಿಗೆ ಮಾಡು ನೇತ್ರದಾನ

ಬಡವರಿಗೆ ಮಾಡು ಭೂದಾನ

ನೊಂದವರಿಗೆ ಮಾಡು ಸಮಾಧಾನ 

ಇವ್ಯಾವ ದಾನಗಳನ್ನು ನಿನ್ನಿಂದ

ಮಾಡಲಾಗದಿದ್ದರೂ ಪರವಾಗಿಲ್ಲ.

ನಿನ್ನನ್ನು ಹುಚ್ಚನಂತೆ ಪ್ರೀತಿಸುವ 

ಈ ಹುಚ್ಚು ಪ್ರೇಮಿಗೆ 

ಮಾಡು ನಿನ್ನ ಹೃದಯದಾನ…

ಅದುವೇ ದಾನಗಳ ದಾನ 

ಮಹಾದಾನ ಹೃದಯದಾನ…