

ಹಾವೇರಿ (ಸೆ 02) ರೋಟರಿ ಇಂಟರ್ನ್ಯಷನಲ್ ಡಿಸ್ಟಿಕ್ 3170 ದ ಗವರ್ನರ್ ನಾಸಿರ್ ಬಾರ್ಸಡವಾಲಾ ಅವರು ಬ್ಯಾಡಗಿ ರೋಟರಿ ಕ್ಲಬ್ ಗೆ ಅಧಿಕೃತ ಬೇಟಿ ನೀಡಿ ಕ್ಲಬ್ಬಿನ ಸೇವಾ ಕಾರ್ಯಕ್ರಮಗಳ ಹಾಗೂ ಕ್ಲಬ್ಬಿನ ಲೆಕ್ಕಪತ್ರಗಳ ದಾಖಲೆಗಳ ಆಡಿಟ್ ನಡೆಸಿದರು.

ಗವರ್ನರ್ ಅವರನ್ನು ಮೊದಲು ಸ್ಟೇಷನ್ ರಸ್ತೆಯಲ್ಲಿರುವ ರೋಟರಿ ಸುಸ್ವಾಗತ ಬೋರ್ಡ್ ಮುಂದೆ ಸ್ವಾಗತ ಮಾಡಿಕೊಂಡು ನಂತರ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಟರಿ ಗಾರ್ಡನ್ ತೋರಿಸಿ, ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ಅನ್ನು ಸಹ ಪರಿಶೀಲನೆ ಮಾಡಿದರು. ನಂತರ ಆಸ್ಪತ್ರೆಯ ಆಡಳಿತಾಧಿಕಾರಿಗಳಿಂದ ಆಸ್ಪತ್ರೆಯಲ್ಲಿ ಅವಶ್ಯಕವಾದ ಕೆಲವು ವೈದ್ಯಕೀಯ ಸಲಕರಣೆಗಳನ್ನು ರೋಟರಿಯಿಂದ ನೀಡುವಂತೆ ಮನವಿಯನ್ನು ಲಿಖಿತವಾಗಿ ನೀಡಿದರು.

ನಂತರ ಶಿಡೆನೂರು ರಸ್ತೆಯಲ್ಲಿರುವ CRAB ಕ್ಲಬ್ ನಲ್ಲಿ ಆಫೀಸಿಯಲ್ ವಿಸಿಟ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗವರ್ನರ್ ಅವರು ಇಲ್ಲಿಯವರೆಗೆ ಮಾಡಿದ ಎಲ್ಲ ಸೇವಾ ಕಾರ್ಯಕ್ರಮಗಳನ್ನು ಪರಿಶೀಲನೆ ಮಾಡಿದರು. ಕ್ಲಬ್ಬಿನ ಲೆಕ್ಕ ಪತ್ರ ಎಲ್ಲ ಕಾಗದ ಪತ್ರಗಳನ್ನು ಪರಿಶೀಲಿಸಿ, ಹಿಂದಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಅವರ ಅವಧಿಯ ಆಡಿಟ್ ರಿಪೋರ್ಟ್ನ್ನು ಪರಿಶೀಲಿಸಿ ಕಳೆದ ವರ್ಷದಲ್ಲಿ ಸುಮಾರು 31 ಲಕ್ಷಕ್ಕೂ ಅಧಿಕ ಸೇವಾ ಕಾರ್ಯಗಳು ಆಗಿದ್ದನ್ನು ಕಂಡು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು ಈ ಹಿಂದೆಂದೂ ಬ್ಯಾಡಗಿ ರೋಟರಿ ಕ್ಲಬ್ಬಿನ ಇತಿಹಾಸದಲ್ಲಿ ಆಗಿರದ ಕಂಡರಿಯದ ಸೇವಾ ಕಾರ್ಯಗಳನ್ನು ಮಾಡಿದ್ದು ಬಹಳ ಹೆಮ್ಮೆಯ ವಿಷಯ ಹಾಗೂ ಅವರ ಕಾರ್ಯಕ್ಷಮತೆ ಬಗ್ಗೆ ಪ್ರಶಂಶಿಸಿದರು. ಹಾಗೂ ಕ್ಲಬ್ಬಿನ ದಾಖಲೆಗಳನ್ನು ಬಹಳ ಅಚ್ಚುಕಟ್ಟಾಗಿ ಇಟ್ಟು ಎಲ್ಲ ವಿಭಾಗಗಳಲ್ಲಿ ಸೇವಾ ಕಾರ್ಯ ಪೂರ್ಣಗೊಳಿಸಿದ್ದೀರಿ ಎಂದು ಶ್ಲಾಘಿಸಿದರು. ನಂತರ ಮುಂದಿನ ಸೇವಾ ಕಾರ್ಯಗಳ ಬಜೆಟ್ ಪರಿಶೀಲನೆ ನಡೆಸಲಾಗಿ ಕೆಲವೊಂದು ಮುಂದಿನ ಸೇವಾ ಕಾರ್ಯಗಳಿಗೆ ಸಹಾಯ ನೀಡುವುದಾಗಿ ಸಹ ಭರವಸೆ ನೀಡಿದರು.

ನಂತರ ಮಾತನಾಡಿದ ಗವರ್ನರ್ ಅವರು ಬೆಡಗಿಯು ಒಂದು ವ್ಯಾಪಾರಿ ಕೇಂದ್ರವಾಗಿದ್ದು ಇಲ್ಲಿ ಬಹಳಷ್ಟು ದೊಡ್ಡ ದೊಡ್ಡ ವ್ಯಾಪಾರಿ ಸಂಸ್ಥೆಗಳು ಇವೆ ಹಲವು ಕೋಲ್ಡ್ ಸ್ಟೋರೇಜ್ ಗಳು ಖಾರಪುಡಿ ಇಂಡಸ್ಟ್ರೀಸ್ ಗಳು ಇದ್ದು ಅವರ ಸಹಾಯದಿಂದ ತಾಲೂಕಿನಲ್ಲಿ ದೊಡ್ಡ ದೊಡ್ಡ ಸರ್ವಿಸ್ ಪ್ರಾಜೆಕ್ಟ್ ಗಳನ್ನು ಮಾಡಿರಿ ಎಂದು ಸಲಹೆ ನೀಡಿದರು ಇದಕ್ಕೆ ಸರ್ಕಾರದಿಂದ ಯಾವುದೇ ಕಂಪನಿಗಳು ಒಂದು ನೂರು ಕೋಟಿ ವೈ ವಾಟ್ ನಡೆಸಿದಲ್ಲಿ ಅವರ ಆದಾಯದ ಎರಡು ಪರ್ಸೆಂಟ್ ಸಿಎಸ್ಆರ್ ಫಂಡ್ ಕಡ್ಡಾಯವಾಗಿ ನೀಡಬೇಕೆಂದು ಆದೇಶಿಸಿದೆ ಇದನ್ನು ದೊಡ್ಡ ವೈವಾಟು ಮಾಡುವ ಸಂಸ್ಥೆಗಳಿಗೆ ತಿಳಿಸಿ ಅವರ ಜೊತೆ ಸಂಪರ್ಕಿಸಿ ನಮ್ಮ ರೋಟರಿ ಸಂಸ್ಥೆಗಳಿಂದ ಆಗುವ ಪ್ರಾಜೆಕ್ಟ್ ಗಳಿಗೆ ನಿಮ್ಮ ಸಿಎಸ್ಆರ್ ಫಂಡ್ ನಿಂದ ಅನುದಾನ ನೀಡಿ ಎಂದು ಮನವರಿಸಿ ರೋಟರಿಯಿಂದ ಇಂಟರ್ನ್ಯಷನಲ್ ನಿಂಡ ಸಿಗುವ ಗ್ಲೋಬಲ್ ಗ್ರ್ಯಾಂಟ್ ನಲ್ಲಿ ಅರ್ಧ ಪ್ರತಿಶತ ಇಂತಹ ಸಿಎಸ್ಆರ್ ಫನ್ಡ್ ನೀಡಿದರೆ ಅರ್ಧದಷ್ಟು ಪ್ರತಿಶತ ಪಾಲನ್ನು ಇಂಟರ್ನ್ಯಷನಲ್ ನೀಡುತ್ತದೆ. ಗ್ಲೋಬಲ್ ಗ್ರ್ಯಾಂಟ್ 30 ಲಕ್ಷದಿಂದ ಹಿಡಿದು ಆನೇಕ ಕೋಟಿ ಗೆ ಅಪ್ಲಿಕೇಶನ್ ಹಾಕಬಹುದು ಎಂದು ಸಲಹೆ ನೀಡಿದರು.

ಕ್ಲಬ್ಬಿನ ಹಿಂದಿನ ಹಾಗೂ ಮುಂದಿನ ಎಲ್ಲಾ ಆಗು ಹೋಗುಗಳ ಬಗ್ಗೆ ವಿಚಾರಿಸಿ ಕ್ಲಬ್ಬಿನ ಅನೇಕ ಮನವಿ ಹಾಗೂ ತೊಂದರೆಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಎಲ್ಲವುಗಳನ್ನು ಸರಿಪಡಿಸುವುದಾಗಿ, ಹೆಚ್ಚಿನ ಅನುದಾನ ನೀಡುವುದಾಗಿ ಸಹ ಒಪ್ಪಿಕೊಂಡರು. ಹಾಗೂ ಮಾಜಿ ಅಧ್ಯಕ್ಷರು ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಇವರು ರೋಟರಿ ಇಂಟರ್ನ್ಯಷನಲ್ ಫೌಂಡೇಷನ್ ಗೆ 83000 ರೂಪಾಯಿ ಡೊನೇಶನ್ ನೀಡಿದ್ದರ ಸಲುವಾಗಿ ಪಾಲ್ ಹ್ಯಾರಿಸ್ ಫೆಲೋ ಅನ್ನುವ ಟೈಟಲ್ ಅವಾರ್ಡ್ ಪುರಸ್ಕಾರ ನೀಡಿದರು. ನಂತರ ಕ್ಲಬ್ಬಿನ ಎಲ್ಲ ಸದಸ್ಯರು ಅವರಿಗೆ ಸನ್ಮಾನಿಸಿದರು.

ಈ ಸಂದರ್ಬದಲ್ಲಿ ಮಂಜುನಾಥ ಉಪ್ಪಾರ, ಮಾಲತೇಶ ಅರಳಿಮಟ್ಟಿ, ಮಾಲತೇಶ ಉಪ್ಪಾರ, ಸಿದ್ದು ಬೂದಿಹಾಳಮಠ, ಬಸವರಾಜ ಸುಂಕಾಪುರ, ಅನಿಲಕುಮಾರ ಬೋಡ್ಡಪಾಟಿ, ಪರಶುರಾಮ ಮೆಲಗಿರಿ, ಸುರೇಶ ಗೌಡರ, ವಿಶ್ವನಾಥ ಅಂಕಲಕೋಟಿ, ಪವಾಡೆಪ್ಪ ಆಚನೂರ, ಗಣೇಶ ಅಂಗಡಿ, ಮಹಾದೇವಪ್ಪ ಕೆಂಚನಗೌಡ್ರ, ಶಿವರಾಜ ಚೂರಿ, ಪುಟ್ಟರಾಜು ಕೆ, ಬಸವರಾಜ ಗೊಂದಿ, ನಾಗರಾಜ ಎಸ್, ಮಹೇಶ್ವರಿ ಪಸಾರದ, ವಾಸುಕಿ ಸಂಜೀ ಉಪಸ್ತಿತರಿದ್ದರು
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ
ವಿಶೇಷ ಮುಖ್ಯ ಜಿಲ್ಲಾ ವರದಿಗಾರು …