

ಬೆಂಗಳೂರು( ಸೆ 02 ) ಇತ್ತೀಚಿಗೆ ನಿಮ್ಮ ಬೆಳವಣಿಗೆಯಲ್ಲಿ ಮಾಧ್ಯಮಕ್ಕೆ ಒಂದು. ಮಾಧ್ಯಮ, ದರ್ಶನರವರು, ಸರಿ ಹೋಗಿದ್ದು ನಿಜವಾಗಲೂ ನನಗೆ ಖುಷಿ ತಂದಿದೆ.
ಕೆಲವು ನಡೀತವೆ ಕೆಲವು ಗೊತ್ತಿಲ್ದೆ ನಡೆದುಹೋಗುತ್ತವೆ ದರ್ಶನ್ ಗೆ ದೊಡ್ಡ ಹೆಸರು ಇದೆ, ಅವಾ ದೊಡ್ಡ ನಟ ಹಾಗೂ ದೊಡ್ಡ ಸ್ಟಾರ್ , ಎಲ್ಲಾ ಸರಿ ಇರಬೇಕು ಸಿನಿಮಾ ಸೋಲು ಗೆಲುವಿನ ಮೇಲೆ ಮಾತ್ರ ನಿಂತಿರಬೇಕು ಈ ತರದ ವಿಚಾರಗಳು ನಡೆಯಬಾರದು ಮಾಧ್ಯಮ ಮತ್ತು ದರ್ಶನ್ ಒಂದಾಗಿದ್ದು ನನಗೆ ತುಂಬಾ ಸಂತೋಷವಾಗಿದೆ.

ನಾವು ಕಿತ್ತಾಡ್ಕೊಂಡು, ಮಾತಾಡ್ಕೊಂಡು. ಹಾಗೆ ಅನ್ನೋಂಗಿದ್ರೆ ಕೆಲವೊಂದು ಬಾರಿ ನಾನು ಇಷ್ಟುದ್ದ ಲೆಟರ್ ಬರೆಯುವ ಅವಶ್ಯಕತೆ ಇರಲಿಲ್ಲ. ನಾನು ದರ್ಶನ್ ಒಂದೇ ಕಾರ್ಯಕ್ರಮದಲ್ಲಿ ಸೇರಿದ್ದೇವೆ ಆದರೆ ಅವರಲ್ಲೂ ಸ್ವಲ್ಪ ಪ್ರಶ್ನೆಗಳಿವೆ ನಮ್ಮಲ್ಲೂ ಸ್ವಲ್ಪ ಪ್ರಶ್ನೆಗಳಿವೆ ಆ ಎರಡು ಪ್ರಶ್ನೆಗಳಿಗೂ ಉತ್ತರ ಸಿಕ್ಕಾಗ ಎಲ್ಲದು ಸರಿ ಹೋಗುವುದು ಅದಕ್ಕೆ ಎಲ್ಲರೂ ದಯವಿಟ್ಟು ಕಾಲಾವಕಾಶ ಕೊಡಿ

ನಾನು ತುಂಬಾ ವರ್ಷಗಳ ನಂತರ ಸುಮಲತಾರವರ ಪಾರ್ಟಿಗೆ ಹೋಗಿದ್ದು. ಏಕೆಂದರೆ ನಾನು ಯಾವ ಪಾರ್ಟಿಗೂ ಹೆಚ್ಚಾಗಿ ಹೋಗುವುದಿಲ್ಲ ಅವರು ನನ್ನನ್ನು ಚಿಕ್ಕವಯಸ್ಸಿನಿಂದ ನೋಡಿದವರು ನಾನು ಸಹ ಅವರನ್ನು ಚಿಕ್ಕವಯಸ್ಸಿನಿಂದ ನೋಡುತ್ತಾ ಬೆಳೆದವನು. ಹಾಗಾಗಿ ಆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿ ದರ್ಶನ್ ಇರುವುದು ನನಗೆ ಗೊತ್ತಿದ್ದಿಲ್ಲ ಆದ್ರೂ ತುಂಬಾ ಸಂತೋಷವಾಯಿತು ದರ್ಶನರವರಿಗೆ ತುಂಬಾ ರೆಸ್ಪೆಕ್ಟ್ ಕೊಡ್ತೀನಿ ಜೊತೆಗೆ ಮೊನ್ನೆ ನಡೆದಂತಹ ಒಂದು ಘಟನೆ ನನಗೆ ಸಂತೋಷ ತಂದಿದೆ ದರ್ಶನ್ ಮತ್ತು ಮಾಧ್ಯಮ ಜೊತೆಗೂಡಿದ್ದು ಸಂತಸ ಎಂದು ತಿಳಿಸಿದ್ದಾರೆ.
