ಚಂದ್ರಯಾನ-3, ಚಂದ್ರನ ಅಂಗಳಕ್ಕೆ ಭಾರತ ಹೆಜ್ಜೆ… ಲ್ಯಾಂಡಿಂಗ್ ಗೆ ಕ್ಷಣಗಣನೆ.

ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ ಬುಧುವಾರ ಸುಮಾರು ಸಂಜೆ 6-04ರ ವೇಳೆಗೆ ಚಂದ್ರನ ಮೇಲ್ಭಾಗಕ್ಕೆ ತಲುಪಲಿದ್ದು.ಜಾಗತಿಕ ಮಟ್ಟದಲ್ಲಿ ಕೌತುಕಕ್ಕೆ ಕಾರಣವಾಗಿದೆ. ಒಂದು ವೇಳೆ ಸಾಫ್ಟ್ ಲ್ಯಾಂಡಿಂಗ್ ಆದರೆ ಚಂದ್ರನ ಮೇಲ್ಭಾಗಕ್ಕೆ ಸ್ಪರ್ಶಿಸಿದ ಜಗತ್ತಿನ ನಾಲ್ಕನೇ ರಾಷ್ಟ್ರ ವಾಗಿ ಭಾರತ ಹೊರಹೊಮ್ಮಲಿದೆ. ಈಗಾಗಲೇ ಚಂದ್ರನ ಚಿತ್ರಗಳನ್ನು ಗಗನ ನೌಕೆ ಸೆರೆಹಿಡಿದು ಭೂಮಿಗೆ ರವಾನಿಸಿದೆ . ಸದ್ಯ ಸಾಫ್ಟ್ ಲ್ಯಾಂಡಿಂಗ್ ನೀನು ಕ್ಷಣಗಣನೆ ಆರಂಭವಾಗಿದ್ದು ಈ ನಡುವೆ ಯಾವುದೇ ಅಂಶಗಳು ಪ್ರತಿಕೂಲವೆಂದು ತೋರಿದರೆ ಮಾಡ್ಯೂಲ್ ನ ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗುವುದು ಎಂಬ ಮಾಹಿತಿ ಇದೆ.

ಇನ್ನೂ ಚಂದ್ರನ ಮೇಲ್ಭಾಗದ ತಲುಪಿದ್ದ ಬಳಿಕ ಲ್ಯಾಂಡರ್ ಹಾಗೂ ರೋವರ್ ಏನು ಮಾಡಲಿದೆ ಎಂಬ ಭಯ ಕುತೂಹಲ ಸಾಮಾನ್ಯ ಜನರಲ್ಲಿ ಮೂಡಿದೆ. ಇದಕ್ಕೂ ಮುನ್ನ ನಾಳೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರತಿಕುಲ ವಾತಾವರಣ ಲಭಿಸದೆ ಹೋದರ ಆಗಸ್ಟ್ 27ಕ್ಕೆ ಯೋಜನೆ ಮುಂದೂಡಲಾಗುವ ಸಾಧ್ಯತೆ ಕೂಡ ಇದೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ಮಾಹಿತಿಯನ್ನು ನೀಡಿದು ಕುತೂಹಲಕ್ಕೆ ಕಾರಣವಾಗಿದೆ.

ಚಂದ್ರನ ದಕ್ಷಿಣ ಧ್ರುವ ಪ್ರವೇಶವನ್ನು ಗುರಿತಿಯಾಗಿಸಿಕೊಂಡು ಇಸ್ರೋದ ಚಂದ್ರಯಾನ-3 ಯೋಜನೆ ನಡೆಸಿದೆ. ಜಗತ್ತಿನಲ್ಲೇ ಈ ತನಕ ದಕ್ಷಿಣ ಧ್ರುವ ಪ್ರವೇಶಕ್ಕೆ ಯಾವುದೇ ರಾಷ್ಟ್ರಗಳು ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಕೌತುಕವಾಗಿಯೇ ಉಳಿದಿರುವ ಇಲ್ಲಿನ ಪ್ರದೇಶದಲ್ಲಿ ಚಂದ್ರಯಾನ 3 ಲ್ಯಾಂಡರ್ ಮಂಜುಗಡ್ಡೆ ಅಥವಾ ಹೆಪ್ಪುಗಟ್ಟಿದ ಸ್ಥಿತಿಯಲ್ಲಿರುವ ನೀರಿನ ಪ್ರದೇಶ ಕಂಡು ಬಂದಿದ್ದು ಅದರ ಬಗ್ಗೆ ಅಧ್ಯಯನ ನಡೆಸಲಾಗಿದೆ..

ಇದು ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಲ್ಲಿ ಆಮ್ಲಜನಕ, ಇಂಧನ ಮತ್ತು ನೀರಿನ ಮೂಲವಾಗಿರಬಹುದು ಅಥವಾ ಹೆಚ್ಚು ಶಾಶ್ವತ ಚಂದ್ರನ ವಸಾಹತು ಆಗಿರಬಹುದು ಎನ್ನಲಾಗುತ್ತದೆ.

ಇನ್ನು ರೋವರ್ ಚಂದ್ರನ ನೆಲಕ್ಕೆ ಕಾಲಿರಿಸದ ಬಳಿಕ ಇಸ್ರೋ ವಿಜ್ಞಾನಿಗಳ ನಿಜವಾದ ಕಾರ್ಯ ಆರಂಭವಾಗಲಿದೆ. ಚಂದ್ರನ ಮೇಲೆ ಒಂದು ಲೂನಾರ್ ಡೇ ಅಂದರೆ ಭೂಮಿಯ 14 ದಿನಗಳ ಕಾಲ ರೋವರ್ ಇಲ್ಲಿ ಕಾರ್ಯಚರಣೆಯ ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಇರುವ ಕಮಾಂಡ್ ಸೆಂಟರ್ ಗೆ ಮಾಹಿತಿ ರವಾನಿಸಲಿದೆ.ಹಾಗಾಗಿ ಲ್ಯಾಂಡಿಗ್ ಮತ್ತು ರೋವರ್ ನಲ್ಲಿರುವ ವೈಜ್ಞಾನಿಕ ಉಪಕರಣಗಳಿಂದ ಬರುವ ಟನ್ ಗಳಷ್ಟು ಡೇಟಾವನ್ನು ವಿಜ್ಞಾನಿಗಳು ವಿಶ್ಲೇಷಿಬೇಕಾಗಿರುತ್ತದೆ ಚಂದ್ರನ ಮೇಲ್ಮೈ ಯ ಖನಿಜ ಸಂಯೋಜನೆಯ ಸ್ಪೆಕ್ರ್ಟೋಮೀಟರ್ ವಿಶ್ಲೇಷಣೆ ಸೇರಿದಂತೆ ಸರಣಿ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದ್ದು ಒಟ್ಟಾರೆಯಾಗಿ ನಾಳೆ ಸಂಜೆ 6:00ಗೆ ಚಂದ್ರಯಾನ ಮೇಲ್ಭಾಗ ಸ್ಪರ್ಶ ನಡೆಯುತ್ತಿದ್ದು ಜಗತ್ತು ಚಿತ್ತ ಭಾರತದತ್ತ ಸಾಗುತ್ತಿದ್ದೆ ಪ್ರತಿಕೂಲ ಕಂಡು ಬಂದರೆ ಮಾಡ್ಯೂಲ್ ಲ್ಯಾಂಡಿಂಗ್ ಆಗಸ್ಟ್ 27 ಕ್ಕೆ ಮುಂದೂಡಲಾಗುವು ಎಂಬ ಮಾಹಿತಿ ತಿಳಿದು ಬಂದಿದೆ..

ಚಂದ್ರಯಾನ 3 ಯಶಸ್ವಿಯಾಗಲಿ ಎಂಬುದು ನಮ್ಮ ಆಶಯ…..

  • Related Posts

    ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ, ಮುಂದೆಯೂ ಸ್ಪರ್ಧಿಸುವುದಿಲ್ಲ: ಅಮಿತ್ ಶಾ

    ಹಿಂದಿ ದಿವಸ್‌ ನಿಮಿತ್ತ, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭಾಷಾ ವೈವಿಧ್ಯತೆಗೆ ಹೆಸರುವಾಸಿಯಾದ ರಾಷ್ಟ್ರದಲ್ಲಿ ಹಿಂದಿಯ ಏಕೀಕರಣದ ಪಾತ್ರವನ್ನು ಎತ್ತಿ ತೋರಿಸಿದರು. ನಾಗರಿಕರಿಗೆ ನೀಡಿದ ಸಂದೇಶದಲ್ಲಿ, ಹಿಂದಿ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ ಮತ್ತು…

    ಭಾರತದ ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬೇಕು ,,,”ಬಿಜೆಪಿ ನಾಯಕ ದಿಲೀಪ್ ಘೋಷ್”

    ಇಂಡಿಯಾ (India) ಎಂಬ ಹೆಸರನ್ನು ಭಾರತ (Bharatha) ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ಯಾರೆಲ್ಲ ವಿರೋಧಿಸುತ್ತಾರೋ ಅಥವಾ ಯಾರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ ಅವರೆಲ್ಲಾ ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ತಿಳಿಸಿದ್ದಾರೆ. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಖಾರಗ್ಪುರ…

    Leave a Reply

    Your email address will not be published. Required fields are marked *

    error: Content is protected !!