ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಚಿಂಥನ-ಮಂಥನ ಕಾರ್ಯಕ್ರಮ…

ಮಂಡ್ಯ.   ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕವು ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿಂಥನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು

*ಕರುನಾಡಿನ ರಾಜರ್ಷಿ, ಜನಪರವಾದ ಆಡಳಿತ ನೀಡಿದ ದಕ್ಷ ಆಡಳಿತಗಾರ, ನಮ್ಮೆಲ್ಲರ ಭಾಗ್ಯವಿಧಾತರಾದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಆಡಳಿತವು ಮಾದರಿಯಾಗಿದೆ. ಪ್ರಜೆಗಳ ಹಿತಕಾಪಾಡಲು ಚರಿತ್ರಾರ್ಹವಾದ ನಿರ್ಧಾರಗಳನ್ನು ಕೈಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಅಭಿಮಾನದಿಂದ ಹೇಳಿದರು*

ಬರಡಾಗಿದ್ದ ಮಂಡ್ಯ ಜಿಲ್ಲೆಯ ರೈತರಿಗಾಗಿ ಅರಮನೆಯಲ್ಲಿನ ಚಿನ್ನಾಭರಣಗಳನ್ನು ಮಾರಾಟ ಮಾಡಿ ಕನ್ನಂಬಾಡಿ ಅಣೆಕಟ್ಟು ಕಟ್ಟಿಸಿ ಭತ್ತ ಕಬ್ಬು ಬೆಳೆಯುವ ಬಂಗಾರದ ನಾಡನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಅರಸರಿಗೆ ಮೇಲ್ಪಂಕ್ತಿಯ ದಕ್ಷ ಪ್ರಾಮಾಣಿಕ ಆಡಳಿತ ನೀಡಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ ಎಂದು ಅಭಿಮಾನದಿಂದ ಹೇಳಿದ ಪೂರ್ಣಚಂದ್ರತೇಜಸ್ವಿ ಮಹಿಳಾ ಸಮಾನತೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಜಾತಿ, ಮತ ಪಂಥಗಳಿಂದ ಮುಕ್ತವಾದ  ಸಮಾನತೆಯಿಂದ ಕೂಡಿರುವ ಸಮ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಿದರು ಎಂದು ಗುಣಗಾನ ಮಾಡಿದರು…

ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಸಾಧನೆ ಕುರಿತು ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪದ್ಮೇಶ್ ಮಾತನಾಡಿ ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮಾಭಿವೃದ್ಧಿಗೆ ಒತ್ತು ನೀಡಿ ರಾಜ್ಯದ ಸಮಗ್ರವಾದ ಅಭಿವೃದ್ಧಿಗೆ ಒತ್ತು ನೀಡಿ ಜನತೆಯ ಮಹಾರಾಜರಾಗಿ ಹೊರಹೊಮ್ಮಿದ್ದಾರೆ. ಸಮಾಜದಲ್ಲಿನ ಮೇಲ್ವರ್ಗದ ಜನರಿಂದ ಹಲವಾರು ವಿರೋಧಗಳು ಎದುರಾದರೂ ಜಗ್ಗದೇ ಹಿಂದುಳಿದವರು, ಶೋಷಿತರು ಹಾಗೂ ದಲಿತರಿಗೆ ಶಿಕ್ಷಣದ ಶಕ್ತಿಯನ್ನು ನೀಡಿ ರಾಜಕೀಯ ಸ್ಥಾನಮಾನ ನೀಡಿ ಶಕ್ತಿ ತುಂಬಿದರು. ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಶಿವನಸಮುದ್ರ ಹಾಗೂ ಜೋಗದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ನಾಂಧಿ ಹಾಡಿದರು ಎಂದು ಸ್ಮರಿಸಿದ ಪದ್ಮೇಶ್ ಈ ಹಿಂದೆ ಅತ್ತಿಗುಪ್ಪೆ ಎಂಬ ಹೆಸರಿನಿಂದ ಕರೆಯುತ್ತಿದ್ದ ನಮ್ಮ ತಾಲ್ಲೂಕನ್ನು ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ನೆನಪಿಗಾಗಿ ಕೃಷ್ಣರಾಜಪೇಟೆ ತಾಲ್ಲೂಕು ಎಂದು ನಾಮಕರಣ ಮಾಡಲಾಯಿತು ಎಂದು ಸ್ಮರಿಸಿ, ಕರ್ನಾಟಕ ರಾಜ್ಯದ ಭಾಗ್ಯವಿಧಾತರಾದ ನಾಲ್ವಡಿ ಅವರ ಕೊಡುಗೆಯನ್ನು ವಿವರಿಸಿದರು..

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಪ್ರಾಧ್ಯಾಪಕ ಗಿರೀಶ್, ಪ್ರಾಧ್ಯಾಪಕರಾದ ಸಂಪತ್ಕುಮಾರನ್, ಡಾ.ಹೆಚ್.ಡಿ.ಉಮಾಶಂಕರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಧರ್ಮಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ಹೋರಾಟ ಸಮಿತಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಮುಖಂಡರಾದ ಶೀಳನೆರೆ ಸಿದ್ಧೇಶ್, ಪತ್ರಕರ್ತ ಸೈಯ್ಯದ್ ಖಲೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • Related Posts

    ನಟ ದರ್ಶನ್ ಅವರ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

    ಕೆ.ಆರ್.ಪೇಟೆ:ಕನ್ನಡ ಚಲನಚಿತ್ರ ನಟ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಕೆ.ಆರ್.ಪೇಟೆ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿರುವ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ…

    ಫೆಬ್ರವರಿ 13 ರಂದು ಕಾಪನಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಬ್ರಹ್ಮರಥೋತ್ಸವ

    ಫೆಬ್ರವರಿ 13 ರಂದು ಕಾಪನಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಬ್ರಹ್ಮರಥೋತ್ಸವ* ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಸಮೀಪದ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಬ್ರಹ್ಮ ರಥೋತ್ಸವ ಹಿನ್ನಲೆಯಲ್ಲಿ ಮಠದ ಪೀಠಾಧ್ಯಕ್ಷರಾದ ಚನ್ನವೀರ ಮಹಾಸ್ವಾಮಿಗಳು ಮಠದ ಆವರಣದಲ್ಲೆ ಬ್ರಹ್ಮ ರಥೋತ್ಸವದ ಕರ ಪತ್ರಿಕೆ…

    Leave a Reply

    Your email address will not be published. Required fields are marked *

    error: Content is protected !!