

ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ , ಕರ್ನಾಟಕ… ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ದಾವಣಗೆರೆ.
ದಿನಾಂಕ 5/6 /2022 ರ ಭಾನುವಾರದಂದು ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ತರಳಬಾಳು ರೆಸಿಡೆನ್ಸಿಯಲ್ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ತರಳಬಾಳು ರೆಸಿಡೆನ್ಸಿಯಲ್ ಶಾಲೆ ಸಿಬಿಎಸ್ಸಿ ಪ್ರಾಂಶುಪಾಲರಾದ ಶ್ರೀ ಕೆ ಸೋಮಶೇಖರಪ್ಪ ರವರು ಹಾಗೂ ಸ್ಟೇಟ್ ಎಕ್ಸಿಕ್ಯೂಟಿವ್ ಮೆಂಬರ್ ಆದ ಡಾII ಶಶಿಧರ್ ರವರಿಗೆ ಸ್ಕೌಟ್ ಮತ್ತು ಗೈಡ್ ಮಕ್ಕಳು ತಾವು ತಂದಂತಹ ಗಿಡಗಳನ್ನು ನೀಡಿ ಸ್ವಾಗತಿಸಿದರು ಹಾಗೂ ಶಾಲಾ ಪ್ರಾಂಶುಪಾಲರಾದ ಸೋಮಶೇಖರಪ್ಪ ರವರು ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ಮಕ್ಕಳನ್ನು ಪ್ರೇರೇಪಿಸಿದರು.ತರಳಬಾಳು ರೆಸಿಡೆನ್ಷಿಯಲ್ ಸ್ಕೂಲ್, ಮಾಗನೂರು ಬಸಪ್ಪ ಶಾಲೆ ಮತ್ತು ಬಾಪುಜಿ ಓಪನ್ ಸ್ಕೌಟ್ ಟ್ರೊಪ್ ಹಾಗೂ ಮದರ್ ತೆರೆಸ ಕಂಪನಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳುತಾವು ತಂದಂತಹ ಸುಣ್ಣವನ್ನು ಗಿಡ-ಮರಗಳಿಗೆ ಹಚ್ಚುವುದರ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದರು ಹಾಗೂ ಪರಿಸರ ದಿನಾಚರಣೆಯನ್ನು ಸಂಭ್ರಮದಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ರವೀಂದ್ರ ಸ್ವಾಮಿ ಟಿಎಂ ರವರು ಹಾಗೂ ಸ್ಕೌಟ್ ಮಾಸ್ಟರ್ ಆದ ಬಸವರಾಜ್, (ಮಾಗನೂರು ಬಸಪ್ಪ ಶಾಲೆಯ ) ಶಶಿ ಹಾಗೂ ಮಹೇಶ್ ಕುಮಾರ್ ಗೈಡ್ ಕ್ಯಾಪ್ಟನ್ ಅನಿತಾ ಹಾಗೂ ಸುಜಾತ ರವರು ಮಕ್ಕಳನ್ನು ಪ್ರೊತ್ಸಾಹಿಸಿದರು.