

ಬೆಳಗಾವಿ-ಜೂನ್ 4, ನಿಪ್ಪಾಣಿ ಮತಕ್ಷೇತ್ರದ ಅಪ್ಪಾಚಿವಾಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ, ವಿಧಾನ ಪರಿಷತ್ ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ, *ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ* ಯವರು ಚುನಾವಣಾ ಪ್ರಚಾರ ನಡೆಸಿದರು.
ಶೈಕ್ಷಣಿಕ ವಲಯದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಬಿಜೆಪಿಯನ್ನು ಗೆಲ್ಲಿಸಲು, ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಶ್ರೀ ಹನುಮಂತ ನಿರಾಣಿ ಮತ್ತು ಶ್ರೀ ಅರುಣ ಶಹಾಪುರ ಅವರಿಗೆ ಮತ ನೀಡಿ, ಬೆಂಬಲಿಸಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಸರ್ಜಿರಾವ್ ಹೆಲಾಟೆ, ಉಪಾಧ್ಯಕ್ಷರಾದ ಸೌ. ನಂದಿನಿ ಮ್ಹೇತೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಶ್ರೀ ಆರ್.ಎಂ. ಖೋತ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಆನಂದ ಕುವಾಳೆ, ಸದಸ್ಯರಾದ ಸೌ. ಮಂಗಳ ಜಾಧವ, ಶ್ರೀ.ಕೆ.ಬಿ. ಮಾನೆ, ಮುಖ್ಯೋಪಾಧ್ಯಾಯರಾದ ಶ್ರೀ ಕಿರಣ ಥರಕರ, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.