ಚಿಕ್ಕಬಳ್ಳಾಪುರದ ದಲಿತ ಸಂಘರ್ಷ ಸಮಿತಿ ಕಚೇರಿಯ ಉದ್ಘಾಟನಾ ಸಮಾರಂಭ…

ದಲಿತ ಸಂಘರ್ಷ ಸಮಿತಿ ಕಚೇರಿಯ ಉದ್ಘಾಟನಾ ಸಮಾರಂಭ ಚಿಕ್ಕಬಳ್ಳಾಪುರ : ನಗರದ ಎಂ.ಜಿ.ರಸ್ತೆಯ ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಕಚೇರಿಯನ್ನು ವಿಶ್ವರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡರು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಮಾಜಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಕೆ.ಸಿ.ರಾಜ ಕಾಂತ್ ಅವರು ಮಾತನಾಡಿ, ತಾಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಧಾನ ಕಚೇರಿಯನ್ನು ಪ್ರಾರಂಭಿಸಿದ್ದು ವಿಶ್ವಜ್ಞಾನಿ ಅಂಬೇಡ್ಕರ್ ರವರ ಆಶಯ ಆಲೋಚನೆಗಳನ್ನು ಹಾಗೂ ಅವರ ತತ್ವಸಿದ್ಧಾಂತಗಳನ್ನು ಪಾಲಿಸಿ ಮೈಗೂಡಿಸಿಕೊಳ್ಳಬೇಕು. ದಲಿತ ಸಂಘರ್ಷ ಸಮಿತಿಯ ಚಳುವಳಿಯ ಹಿನ್ನೋಟ ಮುನ್ನೋಟ ಪ್ರಸ್ತುತ ಆಗುಹೋಗುಗಳನ್ನು ಗಮನಿಸುತ್ತಾ ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವ ಗುರಿಯತ್ತ ಪ್ರಾಮಾಣಿಕವಾಗಿ ಪ್ರತಿಯೊಬ್ಬರು ಬದಲಾಗಬೇಕು.


ರಕ್ಷಣೆ ಇಲ್ಲದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು, ಸೂರ್ಯನ ಬಿಸಿಲನ್ನೇ ನೋಡದ ಮುಗ್ಧ ಜನತೆಗೆ, ಭೂರಹಿತರಿಗೆ, ವಿದ್ಯಾಭ್ಯಾಸ ಇಲ್ಲದವರಿಗೆ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಅವರನ್ನು ಗಮನಿಸುತ್ತಿದ್ದೇವೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಈ ಮೇಲ್ಕಂಡ ವರ್ಗದ ಜನರ ಪರವಾಗಿ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕಚೇರಿಯನ್ನು ಪ್ರಾರಂಭಿಸಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಚಿಕ್ಕಬಳ್ಳಾಪುರ ಖ್ಯಾತ ವಕೀಲರೂ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಕೆ.ಎಂ.ಮುನೇಗೌಡ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದ ಅವರು, ದೀನದಲಿತರ ಕಷ್ಟ ಸುಖಗಳಿಗೆ ಸ್ಪಂದಿಸಿ ನೊಂದವರಿಗೆ ಸಹಾಯಹಸ್ತ ವನ್ನು ನೀಡಿ, ರಾಜಸಂಧಾನವನ್ನು ಹಾಗೂ ಸಂಘಟನೆಯನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡು ಉದ್ಘಾಟನೆ ಮಾಡುವ ಉದ್ದೇಶವನ್ನು ತಿಳಿಸಿ ಸಂಘಕ್ಕೆ ಶುಭವನ್ನು ಹಾರೈಸಿದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಪರಮೇಶ್ .ಎನ್.ಅವರು ಮಾತನಾಡಿ,ನಮ್ಮ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಗಸ್ಟ್ ತಿಂಗಳಲ್ಲಿ ಅಂಬೇಡ್ಕರ್ ಜಯಂತಿಯ ಜೊತೆಗೆ ಸಾಮೂಹಿಕವಾಗಿ 101 ಜೋಡಿಗಳಿಗೆ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಕಾನೂನಿನ ಚೌಕಟ್ಟಿನಲ್ಲಿ ಹೆಣ್ಣಿಗೆ 18 ವರ್ಷ ವಯಸ್ಸು,ಗಂಡಿಗೆ 21ವರ್ಷ ವಯಸ್ಸನ್ನು ಹೊಂದಿರುವ ಷರತ್ತುಬದ್ಧ ನಿಯಮಗಳಿಗೆ ಅನುಗುಣವಾಗಿ ಈ ಒಂದು ಮಹತ್ವಪೂರ್ಣ ಕಾರ್ಯಕ್ರಮವನ್ನು ನೆರವೇರಿಸಲು ಪ್ರತಿಯೊಬ್ಬರೂ ನಮ್ಮೊಂದಿಗೆ ಕೈ ಜೋಡಿಸಿಸಹಾಯ,ಸಹಕಾರ ,ಬೆಂಬಲ,ಪ್ರಚಾರವನ್ನು ಸಹ ಮಾಡಿಕೊಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಸಿ.ಜಿ.ಗಂಗಪ್ಪ ಜಿಲ್ಲಾ ಸಂಚಾಲಕರು, ಬಿ.ವಿ.ವೆಂಕಟರಮಣಪ್ಪ ಜಿಲ್ಲಾ ಸಂಘಟನಾ ಸಂಚಾಲಕರು,ಸಂಜಯ್ ಜಿಲ್ಲಾ ಸಂಘಟನಾ ಸಂಚಾಲಕರು, ಪಿ.ನರಸಿಂಹಮೂರ್ತಿ ತಾಲ್ಲೂಕು ಸಂಚಾಲಕರು ಗೌರಿಬಿದನೂರು,ಎನ್. ಎ.ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರು,ವಿ.ಪ್ರಕಾಶ್ ನಗರ ಸಂಚಾಲಕರು,ಸತೀಶ್ ನಗರ ಸಭಾ ಸದಸ್ಯರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು,ಕೃಷ್ಣಪ್ಪ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಾಗೇಪಲ್ಲಿ, ಪೈಪಾಳ್ಯ ರವಿ ತಾಲ್ಲೂಕ್ ಸಂಚಾಲಕರು,ಇಸ್ಕೂಲಪ್ಪ ಮತ್ತು ವರ್ಲಕೊಂಡ ರಾಜು,ರಾಜು ನಗರ ಸಂಚಾಲಕರು,ರಂಜಿತ್, ಮುನೇಶ್, ಟೈಲರ್ ಮಂಜುನಾಥ್,ಇನ್ನಿತರರು ಪಾಲ್ಗೊಂಡಿದ್ದರು.

ವರದಿಗಾರರು: ಆಶಾ ಚಿಕ್ಕಬಳ್ಳಾಪುರ

  • Related Posts

    ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ನೇತ್ರದಾನ ಮತ್ತು ಅಂಗಾಂಗ ದಾನ ಶಿಬಿರ

    ಚಿಕ್ಕಬಳ್ಳಾಪುರ ಜಿಲ್ಲೆ:ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೆಡ್ ಕ್ರಾಸ್ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ನೇತ್ರದಾನ ಮತ್ತು ಅಂಗಾಂಗಗಳ ಶಿಬಿರವನ್ನು ಪುರಸಭೆ ಕಾರ್ಯಾಲಯ ಪಕ್ಕ, ಬಾಗೇಪಲ್ಲಿ ಟೌನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಪುನೀತ್ ರಾಜಕುಮಾರ್ ಅವರ ಹುಟ್ಟು…

    Leave a Reply

    Your email address will not be published. Required fields are marked *

    error: Content is protected !!