

ಜೂನ್ 3, ದಾವಣಗೆರೆ : ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರ ಮನೆಗೆ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗಾ ಸ್ವಾಮೀಜಿ ಅವರು ಭೇಟಿ ನೀಡಿದರು.
ಬೆಳಿಗ್ಗೆ ಆಗಮಿಸಿದ ಶ್ರೀಗಳನ್ನು ಶ್ರೀನಿವಾಸ್ ದಾಸಕರಿಯಪ್ಪ ಅವರ ಕುಟುಂಬ ವರ್ಗ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ನೂತನವಾಗಿ ನಿರ್ಮಾಣ ಮಾಡಲಾದ ಮನೆಯನ್ನು ವೀಕ್ಷಣೆ ಮಾಡಿದ ಶ್ರೀಗಳು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಶ್ರೀನಿವಾಸ್ ದಾಸಕರಿಯಪ್ಪ ಮತ್ತು ಅವರ ಪತ್ನಿ ಸಂಧ್ಯಾ ಶ್ರೀನಿವಾಸ್ ಅವರು ಸಿದ್ಧಗಂಗಾ ಶ್ರೀಗಳ ಪಾದಪೂಜೆ ನೆರವೇರಿಸಿದರು. ಹೂವು, ದೈವದತ್ತವಾದ ಎಲೆಗಳು ಸೇರಿದಂತೆ ಇತರೆ ವಸ್ತುಗಳಿಂದ ಶ್ರೀಗಳ ಪಾದ ತೊಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಮಾತ್ರವಲ್ಲ ಇಡೀ ಕುಟುಂಬ ವರ್ಗದವರು ಸಹ ಶ್ರೀಗಳ ಆಶೀರ್ವಾದ ಪಡೆದರು. ಅವರನ್ನು ಕಣ್ತುಂಬಿಕೊಂಡು ಸಂಭ್ರಮಪಟ್ಟರು.
ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರು ಶ್ರೀಗಳಿಗೆ ಮನೆಗೆ ಭೇಟಿ ನೀಡಿ ಆಶೀರ್ವದಿಸಬೇಕು ಎಂಬ ಆಸೆ ಹೊಂದಿದ್ದರು. ಶ್ರೀಗಳು ಮನೆಗೆ ಬಂದಿದ್ದರಿಂದ ಸಹಜವಾಗಿಯೇ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಸಿದ್ಧಗಂಗಾ ಸ್ವಾಮೀಜಿ ಅವರು ಕಾರ್ಯದೊತ್ತಡದ ಮಧ್ಯೆ ಆಗಮಿಸಿ ಆಶೀರ್ವಾದ ಮಾಡಿದ್ದು ಸುತ್ತಮುತ್ತಲು ವಾಸ ಇರುವ ಜನರು ಖುಷಿಗೂ ಕಾರಣವಾಗಿತ್ತು. ಇನ್ನು ನೆರೆಹೊರೆಯರು ಶ್ರೀಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ನೋಡಲು ಆಗಮಿಸಿದ್ದರು. ಶ್ರೀನಿವಾಸ್ ದಾಸಕರಿಯಪ್ಪ ಅವರು ಸೇರಿದಂತೆ ಕುಟುಂಬ ವರ್ಗದವರೆಲ್ಲರೂ ಶ್ರೀಗಳಿಂದ ಆಶೀರ್ವಾದ ಪಡೆದು ಪುನೀತರಾದರು. ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಶ್ರೀನಿವಾಸ್ ದಾಸಕರಿಯಪ್ಪ ಅವರು ಜೀವನದಲ್ಲಿ ಏನು ಅಂದುಕೊಂಡಿದ್ದಾರೋ ಅದು ಈಡೇರಲಿ ಎಂದು ಶ್ರೀಗಳು ಆಶೀರ್ವದಿಸಿದರು.

ಈ ವೇಳೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ. ದಾಸಕರಿಯಪ್ಪ, ರಂಗಮ್ಮ ಟಿ. ದಾಸಕರಿಯಪ್ಪ, ಉಮಾ ಗಣೇಶ್, ಪದ್ಮ, ರವಿ, ಕೆ. ಎಸ್. ರಮೇಶ್, ದಾಸಕರಿಯಪ್ಪ ಅವರ ಮಕ್ಕಳು, ಮೊಮ್ಮಕ್ಕಳು, ಉದ್ಯಮಿಗಳು, ಭಕ್ತ ವೃಂದದವರು ಹಾಜರಿದ್ದರು.