

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗೆರೆ ಗ್ರಾಮದ ರೂಪಾ ಕೃಷ್ಣಪ್ಪ ಮತ್ತು ಸುಜಾತ ಬಸವರಾಜಪ್ಪ ಇವರು ಮೇ 21 ರಿಂದ 25 ರವರೆಗೆ ರೈಸಿನ್ ಸಂವೇದ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನೇಪಾಳದ ಪೋಖರದಲ್ಲಿ ನಡೆದ ಇಂಡೋ – ನೇಪಾಳ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವುದರ ಪ್ರಯುಕ್ತ ನಮ್ಮ ದೇಶ ಮತ್ತು ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.


ರೂಪ ಹೆಚ್ ಕೆ ಇವರು ಚನ್ನಗಿರಿಯ ಶ್ರೀ ಶಿವಲಿಂಗೇಶ್ವರ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿದ್ದು ಸುಜಾತ ಮತ್ತು ರೂಪ ಇವರಿಬ್ಬರೂ ಅಪ್ಪಟ ಗ್ರಾಮೀಣ ಪ್ರತಿಭೆ ಗಳಾಗಿದ್ದು ಇವರು ಮೊದಲಿನಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ