ವೇಮಗಲ್ ಹೋಬಳಿ : ಕೋಲಾರದ ವೇಮಗಲ್ ತನ್ನ ಜಮೀನನಲ್ಲಿ ಉಳುಮೆ ಮಾಡಲು ಕೃಷಿ ಯಂತ್ರಧಾರೆ ಟ್ರಾಕ್ಟರ್ ಬಾಡಿಗೆಗೆ ತಂದಿದ್ದ ರೋಟರ್ ನಲ್ಲಿ ಉಳುಮೆ ಮಾಡುವ ವೇಳೆ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ನಡೆದಿದೆ.

ಗ್ರಾಮದ ರಾಜೇಶ್ ರವರ ಪತ್ನಿ ಸೌಮ್ಯ ( 35 ) ಎಂಬಾಕೆ ಮೃತ ದುರ್ದೈವಿ.

ಪತಿ ರಾಜೇಶ್ ಎಂಬಾತ ಜಮೀನನಲ್ಲಿ ಉಳುಮೆ ಮಾಡಲು ಕೃಷಿ ಯಂತ್ರದಾರೆ ಟ್ರಾಕ್ಟರ್ ರೋಟರಿ ತಂದು ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಪತಿಗೆ ಮೊಬೈಲ್ ನೀಡಲು ಬಂದ ಪತ್ನಿ ಸೌಮ್ಯ ಟ್ರಾಕ್ಟರ್ ರೋಟರಿನ ಸೀರೆ ಸೆರಿಗೆ ಸಿಲುಕಿಕೊಂಡು ಸ್ಥಳದಲ್ಲಿಯೇ ದೇಹ ತುಂಡಾಗಿತ್ತು.

ಮೃತ ಸೌಮ್ಯ ರವರಿಗೆ ಪತಿ ಒಂದು ಹೆಣ್ಣು ಒಂದು ಗಂಡು ಮಗುವನ್ನು ಹೊಂದಿದ್ದರು. ಸಂಬಂಧಿಕರ ಆಕ್ರಂದನ ಮುಗುಲು ಮುಟ್ಟಿದೆ.

ಘಟನೆ ನಡೆದರು ಸ್ಥಳಕ್ಕೆ ಬರದ ಕೃಷಿ ಯಂತ್ರದಾರೆ ಅಧಿಕಾರಿಗಳು ಬೇಜವ್ದಾರಿತನವನ್ನು ತೋರಿಸಿದ್ದಾರೆ.

ಈ ಸಂಬಂಧ ವೇಮಗಲ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಬಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.