

೩೧ ಮೇ, ಮಾನ್ಯ ಪ್ರಾಧಿನಿ ಶ್ರೀ ನರೇಂದ್ರ ಮೋದಿ ಜಿ ರವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ 8 ವರ್ಷ ಸಮರ್ಪಕವಾಗಿ ಪೂರ್ಣಗೋಲಿಸಿದ್ದು, ಈ ಕುರಿತು ದಾವಣಗೆರೆ ನಗರ ಉತ್ತರ ವಿಧಾನ ಸಭಾ ಕ್ಷೇತ್ರದ 24 ನೇ ವಾರ್ಡಿನ ಎಂ ಎಂ ಸಿ ಸಿ ‘ಎ’ ಬ್ಲಾಕ್ ನಲ್ಲಿ ಇರುವ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ರವೀಂದ್ರನಾಥ ಮಾತಾಡಿ: ಇಂದಿರಾಗಾಂಧಿ 17 ವರ್ಷ ಪ್ರಧಾನಿ ಆಗಿದ್ದರು, ಆದರೆ ದೇಶದಲ್ಲಿ ಹಳ್ಳಿಗಳಲ್ಲಿ ಸ್ವಚ್ಛ ಭಾರತ ಅಭಿಯಾದಡಿಯಲ್ಲಿ 10 ಕೋಟಿ ಶೌಚಾಲಯ ಕಟ್ಟಿಸಲು ನರೇಂದ್ರ ಮೋದಿ ಬರಬೇಕಾಯಿತು.

ದೇಶದಲ್ಲಿ ಗ್ರಾಮ್ ಸಡಕ್ ಯೋಜನೆ ಅಡಿಯಲ್ಲಿ ಸಂಪೂರ್ಣ ದೇಶದಲ್ಲಿ ಸಂಪರ್ಕ ಸಾಧಿಸಲು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ಯೋಜನೆ ಶ್ರೀ ಅಟಲ್ ಜಿ ರವರ ಸರ್ಕಾರ ಮಾಡಿದಲತ್ತು. ಆದರೆ, ಅಂದು ಅಟಲ್ ಜಿ ಸರ್ಕಾರ ಮಾಡಿರು ಸಾಧನೆಗಳನ್ನು, ನಾವು ಕಾರ್ಯಕರ್ತರಾಗಿ ದೇಶದ ಜನತೆಗೆ ಮುಟ್ಟಿಸಲಿಲ್ಲಾ.
ಆದರೆ, ಇಂದು ಆ ತಪ್ಪನ್ನ ಮಾಡುವುದು ಬೇಡ ಮನೆ ಮನೆಗೂ ಮಾನ್ಯ ನರೇಂದ್ರ ಮೋದಿ ಸರ್ಕಾರ ಮಾಡಿರು ಎಲ್ಲಾ ಯೋಜನೆ ಮತ್ತು ಕಾರ್ಯ ಮುಟ್ಟಿಸುವ ಸಂಕಲ್ಪ ಮಾಡೋಣ ಎಂದ ಆಶಿಸಿದರು.

ನಂತರ ಮಾಜಿ ಮುಖ್ಯ ಸಚೇತಕರಾದ ಶ್ರೀ ಶಿವಯೋಗಿ ಸ್ವಾಮಿ ರವರು ಮಾತನಾಡಿ, ವರ್ಷಗಳ ಹಿಂದೆ ಇಲ್ಲಿ ನೆರವೇರಿರುವ ತಾಯಂದಿರ ಪ್ರಾರ್ಥನೆಯ ಮೇರೆಗೆ ಮೋದಿಯವರು ಎರಡನೆಯ ಬಾರಿ ಪ್ರಧಾನ ಆಗಿದ್ದಾರೆ, ಅದೇ ಮಾದರಿಯಲ್ಲಿ ತಮ್ಮ ಆಶಿರ್ವಾದ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪ್ರಭಾರಿಗಳಾದ ಎಲ್.ಎನ್ ಕಲ್ಲೇಶ್, ಮಾಜಿ ಮುಖ್ಯ ಸಚೇತಕರಾದ ಶಿವಯೋಗಿ ಸ್ವಾಮಿ, ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಸುಧಾ ಜಯರುದ್ರೇಶ್, ಕಾರ್ಯಕ್ರಮ ಆಯೋಜಕರಾದ 24 ನೇ ವಾರ್ಡಿನ ಪಾಲಿಕೆ ಸದಸ್ಯರಾ ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್ ಪಟಿಲ್, ಉತ್ತರ ಮಂಡಳ ಅಧ್ಯಕ್ಷರಾದ ಸಂಗನ ಗೌಡರು, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮತ್ತು ಬಸವರಾಜಯ್ಯಾ ಹಾಗು ಇತರೆ ಕಾರ್ಯಕರ್ತರು ಇದ್ದರು.