

ದಾವಣಗೆರೆ ನಗರದ ಎಂ. ಸಿ. ಸಿ ಎ ಬ್ಲಾಕ್‌ನಲ್ಲಿರುವ ಆಶ್ರಯ ಹಿರಿಯ ವನಿತೆಯರ ಆನಂದಧಾಮದಲ್ಲಿ ದಾವಣಗೆರೆ ಜಿಲ್ಲಾ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಭಾನುವಾರ ಕೇಕ್ ಕತ್ತರಿಸಿ, ತಾಯಂದಿರಿಗೆ ಭೋಜನ ಪ್ರಸಾದ ನೀಡುವ ಮೂಲಕ ಡಾ.ರವಿಚಂದ್ರನ್‌ರವರ ೬೧ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ನಟ ರವಿಚಂದ್ರನ್‌ಗೆ ತಾಯಿ ಎಂದರೆ ಬಹಳ ಪ್ರೀತಿ, ನಟ ಡಾ. ರವಿಚಂದ್ರನ್ ಇನ್ನೊಬ್ಬರಿಗೆ ನಿಷ್ಟೂರವಾಗದೇ, ಯಾರಿಗೂ ತೋರಿಸಿಕೊಳ್ಳದೇ, ಹೇಳಿಕೊಳ್ಳದೇ ಅಂತಹ ವ್ಯಕ್ತಿತ್ವ ಇಟ್ಟುಕೊಂಡು ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಅವರು ಚಿತ್ರೋದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಬಳಸಿಕೊಂಡು ಉತ್ತಮ ಮೌಲ್ಯಗಳನ್ನು ಸಾರುವಂತಹ, ಜನ ಮೆಚ್ಚುವಂತಹ ಸದಭಿರುಚಿಯ ಚಿತ್ರಗಳನ್ನು ನಮ್ಮ ಕನ್ನಡ ನಾಡಿಗೆ ನೀಡಲಿ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಇಂದು ರವಿಚಂದ್ರನ್‌ರವರ ಅಭಿಮಾನಿಗಳು ೬೧ನೇ ಜನ್ಮ ದಿನವನ್ನು ರಾಜ್ಯದಾದ್ಯಂತ ಆಚರಿಸುತ್ತಿದ್ದಾರೆ. ತಾಯಿ ಎಂದರೆ ರವಿಚಂದ್ರನ್‌ಗೆ ಬಹಳ ಪ್ರೀತಿ. ಈ ಹಿನ್ನಲೆಯಲ್ಲಿ ದಾವಣಗೆರೆಯ ಅವರ ಅಭಿಮಾನಿಗಳು ಇಂತಹ ವೃದ್ಧಾಶ್ರಮದಲ್ಲಿ ತಾಯಂದಿರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ವರ್ಷವೂ ಸಹಾ ಈ ಕಾರ್ಯವನ್ನು ಆಚರಿಸುತ್ತಾ ಬಂದಿದ್ದಾರೆ ಎಂದರು.
ಕನ್ನಡದ ಅಪ್ರತಿಮ ನಾಯಕ, ನಿಷ್ಠಾವಂತ ವ್ಯಕ್ತಿಯಾದ ನಟ ಪುನೀತ್ ರಾಜಕುಮಾರ ನಿಧನದ ನಂತರ ಅವರು ಮಾಡಿದ ದಾನ ಧರ್ಮ, ಸಾಮಾಜಿಕ ಕಾರ್ಯಗಳ ಬಗ್ಗೆ ತಿಳಿಯಿತು. ಇಂದು ನಾಡಿನಲ್ಲೆಡೆ ಪುನೀತ್ ನೆನಪಿನಲ್ಲಿ ಅವರ ಸ್ಪೂರ್ತಿಯಿಂದ ಹಲವಾರು ಸಂಘ ಸಂಸ್ಥೆ, ಯುವಕರು ತಮ್ಮ ಕೈಲಾದ ಮಟ್ಟಿಗೆ ಸಂಕಷ್ಟದಲ್ಲಿರುವವರಿಗೆ ಒಂದಲ್ಲ ಒಂದು ರೀತಿ ನೆರವಾಗುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಚಿತ್ರೋದ್ಯಮ ಕ್ಷೇತ್ರದಲ್ಲಿ ನಟ ಡಾ.ರವಿಚಂದ್ರನ್ ಒಬ್ಬ ಮೇರು ಪ್ರತಿಭೆಯಾಗಿದ್ದಾರೆ. ನಮ್ಮ ನಾಡು ನುಡಿ ಬೆಳೆಸುವ ನಿಟ್ಟಿನಲ್ಲಿ ಜನರ ಅಭಿಮಾನ, ಭಾಷೆ ಉಳಿಸಬೇಕೆಂದು ನಮ್ಮ ಕನ್ನಡ ನಾಡಿಗೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ತಮ್ಮ ಖಾಸಗಿ ಬದುಕು ಕೂಡಾ ಅಷ್ಟೇ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ ಮಾತನಾಡಿ, ಕಳೆದ ೨೦ ವರ್ಷಗಳಿಂದ ದಾವಣಗೆರೆಯಲ್ಲಿ ರವಿಚಂದ್ರನ್ ಅಭಿಮಾನಿಗಳು ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಭೋಜನ ವ್ಯವಸ್ಥೆ, ರಾಷ್ಟಿçÃಯ ನಾಯಕರ ಜಯಂತಿ, ರಕ್ತದಾನ ಶಿಬಿರ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ರವಿಚಂದ್ರನ್ ಜನ್ಮದಿನದಂದು ಆಚರಿಸಿಕೊಂಡು ಬರುತ್ತಿದ್ದಾರೆ. ಪುನಿತ್ ರಾಜಕುಮಾರ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿದ್ದರು. ಅದು ಈಗ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಂ.ಮನು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಮರ ಸೇನೆ ರಾಜ್ಯ ಕಾರ್ಯದರ್ಶಿ ಡಾ.ಬಿ.ವಾಸುದೇವ, ಅಧ್ಯಕ್ಷೆ ಮಾಲಾ, ಪ್ರಧಾನ ಕಾರ್ಯದರ್ಶಿ ಗಣೇಶ ಚಿನ್ನಿಕಟ್ಟೆ, ಕನ್ನಡ ಸಮರ ಸೇನೆಯ ರಾಜ್ಯಾಧ್ಯಕ್ಷೆ ದ್ರಾಕ್ಷಾಯಣಮ್ಮ, ಸಿದ್ದೇಶ ಕೋಟಿಹಾಳ್, ಅಧ್ಯಕ್ಷೆ ಸುನಿತಾ, ಆನಂದ ಧಾಮದ ಅಧ್ಯಕ್ಷೆ ಸುನಿತಾ, ವಾರ್ಡನ್ ಲತಾ, ಕೆ.ಪಿ. ವಿಜಯಕುಮಾರ, ಮಂಜುನಾಥ, ಪಂಚಾಕ್ಷರಯ್ಯ, ಲತಾ ತಿಪ್ಪೇಶ, ರಾಜೇಶ್ವರಿ ಹಾಗೂ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು ಇದ್ದರು.