

ಇದೆ ಜೂನ್ 2022ರಂದು ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 19 ರಂದು ಪ್ರಕಟಿಸಿದೆ.
ಜೂನ್ 27 ರಿಂದ ಆರಂಭವಾಗುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಜುಲೈ 4 ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 27ರಂದು ವಿಜ್ಞಾನ ಮತ್ತು ರಾಜಶಾಸ್ತ್ರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರವರೆಗೆ ನಡೆಯಲಿದೆ.
ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತ ಮಧ್ಯಾಹ್ನ 2:00 ರಿಂದ 5:15 ರವರೆಗೆ ನಡೆಯಲಿದೆ.
ಜೂನ್ 28 ರಂದು ಪ್ರಥಮ ಭಾಷೆ ಕನ್ನಡ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್ ಭಾಷಾ ಪರೀಕ್ಷೆಗಳು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ವರೆಗೆ ನಡೆಯಲಿದೆ.
ಜೂನ್ 29 ರಂದು ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.
ಜೂನ್ 30 ರಂದು ಸಮಾಜ-ವಿಜ್ಞಾನ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರ ವರೆಗೆ ನಡೆಯಲಿದೆ.
ಜುಲೈ 1 ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್. ಪರ್ಷಿಯನ್. ಉರ್ದು ಸಾಂಸ್ಕೃತ, ಕೊಂಕಣಿ, ತುಳು, ತಮಿಳು ಭಾಷಾ ಪರೀಕ್ಷೆಗಳು ಬೆಳಗ್ಗೆ 10:30 ರಿಂದ ಮಧ್ಯಹ್ನ 1:30 ರವರೆಗೆ ನಡೆಯಲಿದೆ.
ಹಾಗೂ ಎನ್ ಎಸ್ ಕ್ಯೂ ಎಪ್ ಪರೀಕ್ಷೆ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರಿಟೇಲ್ ಆಟೋಮೊಬೈಲ್ ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್ ಪರೀಕ್ಷೆ ಬೆಳಗ್ಗೆ 10:30 ರಿಂದ 12:45 ರವರೆಗೆ ನಡೆಯಲಿದೆ.
ಜುಲೈ 2 ರಂದು ಕೋರ್ ಸಬ್ಜೆಕ್ಟ್ ಗಳಾದ ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್-2 ಬೆಳಗ್ಗೆ 9:30 ರಿಂದ 12:45 ರವರೆಗೆ.
ಎಂಜಿನಿಯರಿಂಗ್ ಗ್ರಾಫಿಕ್ಸ್ -2, ಮಧ್ಯಾಹ್ನ 2:00 ರಿಂದ ಸಂಜೆ 5:15ರವರೆಗೆ. ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್
ಜುಲೈ 3 ರಂದು ಬೆಳಗ್ಗೆ 9:30 ರಿಂದ 12:45 ರವರೆಗೆ. ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಬೆಳಗ್ಗೆ 9:30 ರಿಂದ 12:45 ರವರೆಗೆ ಅರ್ಥಶಾಸ್ತ್ರ ಬೆಳಗ್ಗೆ 9:30 ರಿಂದ 12:45 ರವರೆಗೆ ನಡೆಯಲಿದೆ.
ಜುಲೈ 4 ರಂದು ಕೋರ್ ಸಬ್ಜೆಕ್ಟ್ ಗಳಾದ ಗಣಿತ ಸಮಾಜಶಾಸ್ತ್ರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರ ವರೆಗೆ ನಡೆಯಲಿದೆ…