

ದಾವಣಗೆರೆ ಸಮೀಪವಿರುವ ಹೊಸಕುಂದುವಾಡ ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ಧಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು, ಗ್ರಾಮದ 2 ಕಿಲೋ ಮೀಟರ್ ಸುತ್ತಲೂ ಮುಳ್ಳಿನ ಬೇಲಿ, ಇಡೀ ಗ್ರಾಮಕ್ಕೆ 9 ದಿನಗಳ ಕಾಲ ಊರಿನ ಮುಖ್ಯ ದ್ವಾರ ಬಿಟ್ಟರೆ ಬೇರೆ ಎಲ್ಲೂ ಒಳ ಹೋಗಲು, ಹೊರ ಬರಲು ಅವಕಾವಿಲ್ಲ.
ಊರಿನ ಸುತ್ತ ಪ್ರವೇಶವಾಗುವ ಕಡೆಯೆಲ್ಲ ಕಾವಲುಗಾರರು ಕಾವಲು ಕಾಯುತ್ತಿರುತ್ತಾರೆ. ಹಾಲು, ಮೊಸರು, ಊಟ 9 ದಿನಗಳ ಕಾಲ ಊರಿಂದ ಹೊರಗಡೆ ಹೋಗುವಾಗಿಲ್ಲ
2007 ರಲ್ಲಿ ನೆಡೆದಿದ್ದ ಜಾತ್ರೆ, ಇಂದಿಗೆ 15 ವರ್ಷಗಳ ನಂತರ ನೆಡೆಯುತ್ತಿರುವ ಮಾರಿಕಾಂಬಾ ಜಾತ್ರೆ, ಈ ಜಾತ್ರೆ 9 ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಯಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಳ್ಳದೆ ಓಡಾಡೊತಾರೆ ಇಲ್ಲಿನ ಗ್ರಾಮಸ್ಥರು. ಹಾಗೂ 9 ದಿನಗಳ ಕಾಲ ಗ್ರಾಮದ ಜನರು ಯಾವುದೇ ದುಶ್ಚಟಗಳನ್ನು ಮಾಡುವಂತಿಲ್ಲ ಮತ್ತು ಯಾವುದೇ ವಸ್ತುಗಳನ್ನ ಗ್ರಾಮದ ಒಳಗೆ ತಂದರೆ ಯಾವುದೇ ವಸ್ತುಗಳನ್ನು ಹೊರ ತೆಗೆದುಕೊಂಡು ಹೋಗುವಂತಿಲ್ಲ,
ಯಾರು ಕೂಡ ಹೊಸಬರು ಊರಿಗೆ ಬರುವಂತಿಲ್ಲ ಬಂದರೆ ಹಬ್ಬ ಆಗುವ ವರೆಗೂ ಹೊರಗೆ ಹೋಗುವಂತಿಲ್ಲ….
ಊರಿಗೆ ಮಳೆ ಬೆಳೆ ಚನ್ನಾಗಿ ಆಗಿ ಗ್ರಾಮ ಸಂಪತ್ಭರಿತವಾಗಿ ಇರಲಿ ಅಂತ ಈ ವಿಶಿಷ್ಟ ಆಚರಣೆ, 9 ದಿನಗಳ ಕಾಲ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಮಾಡಿ ಜಾತ್ರೆ ನಡೆಸೋ ಗ್ರಾಮಸ್ಥರು, ಏನೇ ಆದರೂ 9 ದಿನಗಳ ಕಾಲ ಊರಿನಿಂದ ಹೊರ ಹೋಗದಂತೆ ಕಟ್ಟು ಹಿಟ್ಟಿನಿಂದ ಹಬ್ಬ ಆಚರಣೆ ಮಾಡುತ್ತಾರೆ.
ಮಾರಿಕಾಂಬಾ ಜಾತ್ರೆ ಮಾಡದಿದ್ದರೆ ಊರಿನ ಜನರಿಗೆ ಕೇಡು ಆಗುವ ಭಯದಿಂದ ಎಲ್ಲರೂ ಸೇರಿ ಹಬ್ಬ ಮಾಡುತ್ತಾರೆ. ಮುಂದಿನ ಬಾರಿ 5 ವರ್ಷಗಳಿಗೊಮ್ಮೆ ಹಬ್ಬ ಆಚರಣೆ ಮಾಡಿ ಪರಂಪರೆ ಮುಂದುವರೆಸಿಕೊಂಡು ಹೋಗಬೇಕು ಎಂದಿದಾರೆ ಇಲ್ಲಿನ ಗ್ರಾಮದ ಜನಗಳು.