

ಜಗಳೂರು :- ತಾಲ್ಲೂಕಿನ
ಬಸವನಕೋಟೆ ಗ್ರಾಮದಲ್ಲಿ ನೆಡೆದ ಶ್ರೀ ಹುಲಿಗೇಮ್ಮದೇವಿ ಹಾಗೂ ಶ್ರೀ ಹೊಸೂರಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಮತ್ತು ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೆರ ವೇಳೆ ಭೋವಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿ ,ಮಾಡಿವಾಳ ಮಾಚಿದೇವ ಮಹಾಸ್ವಾಮಿಜೀಯವರು ಹಾಗೂ ಶ್ರೀ ಶ್ರೀ ಕುಂಬಾರ ಪಿಠದ ಮಹಾಸ್ವಾಮಿಜೀಯರು , ಶ್ರೀ ತಂಗಡಗಿ ಹಡಪದ ಪಿಠದ ಅನ್ನಪ್ಪಣ್ಣ ಸ್ವಾಮಿಜೀಯವರು, ಶ್ರೀ ರಟ್ಟಿಹಳ್ಳಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಇವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು ಆಶೀರ್ವಚನ ನೀಡಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಪಿ. ರಾಜೇಶ್ , ಕೆ.ಪಿ.ಸಿ.ಸಿ. ಎಸ್.ಟಿ. ಘಟಕದ ರಾಜ್ಯಧ್ಯಕ್ಷ ಕೆ.ಪಿ. ಪಾಲಯ್ಯ , ಜಿಲ್ಲಾ ಕಾಂಗ್ರೆಸ್ ಡಿ. ಬಸವರಾಜ್ , ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ , ಬಿಸ್ತುವಳ್ಳಿ ಬಾಬು ಸೇರಿದಂತೆ ಗ್ರಾಮದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.