

ಹೊನ್ನಾಳಿ:- ಬೇಲಿ ಮಲ್ಲೂರು ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ. ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.
ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯನ್ನ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದಲ್ಲಿ ನಡೆದಿದೆ. 50 ವರ್ಷದ ಮಂಜಪ್ಪ ಎಂಬಾತ ಮಗನಿಂದಲೇ ಕೊಲೆಯಾಗಿರುವ ನತದೃಷ್ಟ. ಇನ್ನು, 34 ವರ್ಷದ ನರಸಿಂಹಪ್ಪ ತಂದೆಯನ್ನೇ ಕೊಲೆ ಮಾಡಿರುವ ಮಗ. ಬೆಳಿಮಲ್ಲರು ಗ್ರಾಮದಲ್ಲಿ ರಾತ್ರಿ ತಂದೆ ಮಗನ ಮಧ್ಯೆ ಕುಡಿಯಲು ಹಣ ನೀಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಮಧ್ಯೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಗ ನರಸಿಂಹಪ್ಪ ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಆಗ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ತಂದೆ ಮಂಜಪ್ಪ ಸಾವನ್ನಪ್ಪಿದ್ದಾನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ನರಸಿಂಹಪ್ಪನನ್ನ ಬಂಧಿಸಿದ್ದಾರೆ.ಈ ಬಗ್ಗೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.