ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ 

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ದ ಸೋಕ್‌ ಮಾರ್ಕೇಟ್‌’ ಗೆ ಚಾಲನೆ

• ಏಪ್ರಿಲ್‌ 17ರ ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ.

ಬೆಂಗಳೂರು, ಏ.8: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವಾದ ‘ದ ಸೋಕ್‌ ಮಾರ್ಕೆಟ್’ ಅನ್ನು ಆಯೋಜಿಸಲಾಗಿದ್ದು, ಶುಕೃವಾರ ಚಾಲನೆ ನೀಡಲಾಯಿತು. ಈ ಮೇಳವನ್ನು ಮಿಸ್‌ ಗ್ಲೋಬ್‌ ಇಂಡಿಯಾ ಸೌಂದರ್ಯ ಗೌಡ ಹಾಗೂ ನಟಿ ಮಧುಶ್ರೀ ಅವರು ಆಂಟಿಕ್ ಆಭರಣಗಳನ್ನು ತೊಡುವ‌ ಮೂಲಕ ವಿಶೇಷವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸೌಂದರ್ಯ ಗೌಡ, ”ನಾಡಿನ ಕಲಾವಿದರು ತಮ್ಮ ಕ್ರಿಯಾಶೀಲತೆಯನ್ನು ಕಲಾ ಉತ್ಪನ್ನಗಳ ತಯಾರಿ ಮೂಲಕ ತೋರಿಸಿದ್ದಾರೆ. ಸೀರೆಗಳು, ಆಭರಣಗಳ ಇತ್ಯಾದಿಗಳ ಮೇಲೆ ಕಲಾಕುಸುರಿಯನ್ನು ಬಳಸಿ ಅತ್ಯಾಕರ್ಷಕ ವಸ್ತುಗಳನ್ನು ಸಿದ್ಧಪಡಿಸಿ ತಂದಿದ್ದಾರೆ. ಅವರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲಾವಿದರ ಕಲೆಯ ಮೌಲ್ಯ ಹೆಚ್ಚಿಸೋಣ” ಎಂದರು.

ನಟಿ ಮಧುಶ್ರೀ ಮಾತನಾಡಿ, ”ಒಂದೇ ಸೂರಿನಡಿ ಎಲ್ಲವೂ ಸಿಗಲಿವೆ. ದೇಶದ ನಾನಾ ರಾಜ್ಯಗಳ ವೈಶಿಷ್ಟ್ಯ ಒಂದೆಡೆ ಸೇರಿದೆ. ಇದನ್ನು ನೋಡುವುದೇ ಒಂದು ಖುಷಿಯ ಸಂಗತಿ. ಹೆಚ್ಚು ಹೆಚ್ಚು ಗ್ರಾಹಕರು ಬಂದರೆ ಕಲಾವಿದರಿಗೂ ಅನುಕೂಲವಾಗುತ್ತದೆ. ಎಲ್ಲಾ ವರ್ಗದ ಮಹಿಳೆಯರಿಗೂ ಬೇಕಾದ ವಸ್ತುಗಳು ಇಲ್ಲಿವೆ” ಎಂದರು.

80 ಕ್ಕೂ ಹೆಚ್ಚು ಮಾರಾಟ ಮಳಿಗೆಗಳಿದ್ದು, ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ತಾವು ತಯಾರಿಸಿದ ಅಪರೂಪದ, ಆಕರ್ಷಕ ವಸ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ. ಕಲಾವಿದರು ತಮ್ಮ ಉತ್ಪನ್ನಗಳನ್ನು ನೇರವಾಗಿ ಜನರಿಗೆ ತಲುಪಿಸುವರು.
ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

ಈ ಮೇಳದಲ್ಲಿ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣ, ಕುಮಾರ ಕೃಪಾ ರಸ್ತೆ. ಸಮಯ: ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ. ಏಪ್ರಿಲ್ 17 ರವರೆಗೆ ಮುಂದುವರಿಯುತ್ತದೆ.
ಪ್ರವೇಶ ಉಚಿತವಾಗಿದೆ.

  • Related Posts

    ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮದ ಅರಿವು ಮೂಡಿಸಿ ಅಪಘಾತ ತಪ್ಪಿಸಿ : ಜಿ.ಜಗದೀಶ್

    ಬೆಂಗಳೂರು ನಗರ ಜಿಲ್ಲೆ, ಜನವರಿ 31 ಬೆಂಗಳೂರು ನಗರದಲ್ಲಿ ಅತಿ ವೇಗದ ವಾಹನ ಚಾಲನೆಯಿಂದಾಗಿ ಅಪಘಾತ ಹೆಚ್ಚಾಗುತಿರುವ ಕಾರಣ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಅರಿವು ಮೂಡಿಸಿ ಎಂದು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ…

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಸಭೆ

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು…

    Leave a Reply

    Your email address will not be published. Required fields are marked *

    error: Content is protected !!