

ಜಗಳೂರು: ತಾಲೂಕಿನ 40ವರ್ಷದ ತಿಪ್ಪೇಸ್ವಾಮಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ 34 ವರ್ಷದ ಅರ್ಷಿತರನ್ನು ಕಳೆದ 15 ವರ್ಷಗಳ ಹಿಂದೆ ವಿವಾಹವಾಗಿದ್ದ ಇತ ಚಿತ್ರದುರ್ಗ ದಲ್ಲಿ ಖಾಸಗಿ ಬಿಎಸ್ಸಿ ನಸರ್ಿಂಗ್ ಕಾಲೇಜ್ ನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ.
ಘಟನೆಯ ವಿವರ : ಮಾ .21 ರ ಮದ್ಯರಾತ್ರಿ ತಿಪ್ಪೇಸ್ವಾಮಿ ಹೆಂಡತಿ ಅರ್ಷಿತರನ್ನು ಮತ್ತು 3 ಜನ ಮಕ್ಕಳೊಂದಿಗೆ ತನ್ನ ಕಾರಿನಲ್ಲಿ ತೊರಣಗಟ್ಟೆಯಿಂದ ಚಿತ್ರದುರ್ಗಕ್ಕೆ ಕಲ್ಲೇದೇವರಪುರ ಮಾರ್ಗವಾಗಿ ತೆರಳುತ್ತಿದ್ದು ಈ ವೇಳೆ ಹೆಂಡತಿಗೆ ತಂದೆ ತಾಯಿ ಯಿಂದ ಪೋನ್ ಕರೆ ಬಂದಿದ್ದು ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದಾಳು.
ಈ ವೇಳೆ ಮದ್ಯದ ಆಮಲಿನಲ್ಲಿದ್ದ ತಿಪ್ಪೇಸ್ವಾಮಿ ಅನೈತಿಕ ಸಂಬಂದ ಶಂಖೆ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಕಾರನ್ನು ನಿಲ್ಲಿಸಿ ಯಾರ ಜೊತೆ ಮಾತನಾಡುತ್ತಿದ್ದಿಯ ಎಂದು ವಾದ ಮಾಡಿ ಕಾರಿನಲ್ಲಿ 3 ಮಕ್ಕಳನ್ನು ಲಾಕ್ ಮಾಡಿ ಹೆಂಡಿತಿಯನ್ನು ಕಾರಿನಿಂದ ಕೆಳಗಿಳಿಸಿಕೊಂಡು ರಾಡ್ ನಿಂದ ಹಲ್ಲೇ ಮಾಡಿದ್ದಾನೆ ತಾಯಿಯ ನರಳ ನೋಡಿದ ಮಕ್ಕಳು ತನ್ನ ತಂದೆಯ ಸಹೋದರರಿಗೆ ಫೊನ್ ಮೂಲಕ ವಿಷಯ ತಿಳಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಅವರು ಅರ್ಷಿತರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಆಕೆಯನ್ನು ಪರೀಕ್ಷಿಸಿದ ವೈದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರು ಬಾ ಆಸ್ಪತ್ರೆಗೆ ರೆಫರ್ ಮಾಡಿದ್ದರು ಆಕೆ ಚಿಕಿತ್ಸೆ ಫಲಕಾರಿಯಾಗದೇ ಏ. 4 ರ ಸಂಜೆ ಮೃತ ಪಟ್ಟಿದ್ದಾಳೆ . ಪತಿ ತಿಪ್ಪೇಸ್ವಾಮಿ ತಲೆ ಮಾರೆಸಿ ಕೊಂಡಿದ್ದಾನೆ .
ಈ ಸಂಭಂದ ಜಗಳೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೈಶಾಚಿಕ ಕೃತ್ಯ ಕೇಳಿದ ತೋರಣಗಟೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.