

ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕಾಲಿಕ ಮಳೆ, ಗಾಳಿ, ಮಿಂಚು, ಸಿಡಿಲುಗಳ ಆರ್ಭಟ.
ಅಕಾಲಿಕ ಮಳೆಯಿಂದಾಗಿ ಕೊಟ್ಟಂತರ ರೂ ಮೌಲ್ಯದ ಒಣ ದ್ರಾಕ್ಷಿ ಬೆಳೆ ಹಾನಿ..
ದಿನವೆಲ್ಲಾ ಸುಡೋಸುಡು ಬಿಸಿಲಿನ ತಾಪಮಾನ ಸಂಜೆ ಸುಮಾರಿಗೆ ಮಳೆ, ಗಾಳಿ ಮಿಂಚು ಸಿಡಿಲುಗಳಿಂದ ಜನಜೀವನ ಅಸ್ತವ್ಯಸ್ಥ..
ಅಥಣಿ ತಾಲೂಕಿನ ಕೊಕ್ಕಟನೂರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೇಕೆ ಸಾವನ್ನಅಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ…
ತಾಂವಶಿ ಗ್ರಾಮದ ವಾಸುದೇವ ಪೂಜಾರಿ ವೆಂಬುವರ ಮನೆ ಮುಂದೆ ಕಟ್ಟಿದ ಹಸು ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದೆ..
ಸಿಡಿಲು ಹೊಡೆದ ಶಬ್ದಕ್ಕೆ ಸ್ವಲ್ಪ ಹೊತ್ತಿನ ವರೆಗೂ ಕಂಗಾಲಾದ ಮನೆಯವರು.
ಒಟ್ಟಿನಲ್ಲಿ ಈ ಅಕಾಲಿಕ ಮಳೆ, ಗಾಳಿ ಮಿಂಚು ಸಿಡಿಲುಗಳಿಂದ ಇನ್ನೂ ಏನೇನೊ ಅವಾಂತರ ಕಾದಿದಿಯೋ ಗೊತ್ತಿಲ್ಲಾ..
ಜನರು ಜಾಗೃಕತೆಯಿಂದ ಇರೋದೇ ಒಳಿತು.