

ಜಗಳೂರು :- ಅಪರಿಚಿತ ವಾಹನ ಒಂದು ಪಾದಚಾರಿ ಮೇಲೆ ಹರಿದು ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಹೊರವಲಯದ ಹನುಮಂತಪುರ ರಸ್ತೆಯಲ್ಲಿ ಇಂದು ಸೋಮವಾರ ಸಂಭವಿಸಿದೆ.

www.yashasvitv.com
ಅಣಬೂರು ಗೊಲ್ಲರಹಟ್ಟಿ ಗ್ರಾಮದ 28 ವರ್ಷದ ರಾಜು ಮೃತ ವ್ಯಕ್ತಿಯಾಗಿದ್ದು ಈತ ಜಗಳೂರು ಕಡೆಯಿಂದ ಹನುಮಂತಪುರ ರಸ್ತೆ ಮಾರ್ಗವಾಗಿ ಅಣಬೂರು ಗೊಲ್ಲರಹಟ್ಟಿ ತಮ್ಮ ಗ್ರಾಮಕ್ಕೆ ತೆರೆಳುತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಈ ಘಟನೆ ಜಗಳೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.