

ಕೇಂದ್ರ ಜಲಶಕ್ತಿ ತಂಡದ ನೋಡಲ್ ಅಧಿಕಾರಿ ಶ್ರೀ ಡಿ.ವಿ. ಸ್ವಾಮಿ (IAS) ಹಾಗೂ ಸೆಂಟ್ರಲ್ ಗ್ರೌಂಡ ವಾಟರ್ ಬೋರ್ಡ್ ವಿಜ್ಞಾನಿ ಡಾ.ಸುಚೇತನಾ ಬಿಸ್ವಾಸ್ ರವರು ಇಂದು ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಂದಕ ಕಾಮಗಾರಿ, ಕಲಕಾಂಬ ಗ್ರಾ.ಪಂ. ವ್ಯಾಪ್ತಿಯ GWM ಕಾಮಗಾರಿ, ಮುಚ್ಚಂಡಿ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೆರೆ ನಿರ್ಮಾಣ ಕಾಮಗಾರಿಗೆ ಭೇಟಿ ನೀಡಿದರು.

ಖಾನಾಪೂರ ತಾಲ್ಲೂಕಿನ ರಾಮಗುರವಾಡಿ ಹಾಗೂ ಶಿಂಧೋಳಿ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಂದಕ ನಿರ್ಮಾಣ, ಕೃಷಿ ಹೊಂಡ, ಕೆರೆ ಹೂಳೆತ್ತುವುದು, ನಾಲಾ ನಿರ್ಮಾಣ ಹಾಗೂ ಅರಣ್ಯೀಕರಣ ಕಾಮಗಾರಿಗಳನ್ನು ಪರಿಶೀಲಿಸಿದರು ಹಾಗೂ ಅವುಗಳಿಂದ ಉಂಟಾಗಿರುವ ಪ್ರಯೋಜನಗಳ ಬಗ್ಗೆ ಅಧಿಕಾರಿಗಳು, ಕೂಲಿಕಾರರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿ.ಪಂ. ಯೋಜನಾ ನಿರ್ದೇಶಕರಾದ ಶ್ರೀ ರವಿ ಬಂಗಾರೆಪ್ಪನವರ ಖಾನಾಪೂರ ತಾಲ್ಲೂಕಿನ ತಾಪಂ. ಸಹಾಯಕ ನಿರ್ದೇಶಕರಾದ (ಗ್ರಾಉ) ಶ್ರೀಮತಿ ರೂಪಾಲಿ ಬಡಕುಂದ್ರಿ ಜಿ.ಪಂ. ADPC, DIEC, DMIS, PDO, TC, TIEC, TA (ಸಿವಿಲ್ ಮತ್ತು ಅರಣ್ಯ) ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.