

ಫೆ 24 ಮತ್ತು 25ರ ಗುಡೆಕೋಟೆ ಉತ್ಸವ, ಯಶಸ್ಸಿಗೆ ಕೈ ಜೋಡಿಸಿ-ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಕರೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ, ಫೆಬ್ರವರಿ 24 ಹಾಗೂ 25ರಂದು. ಜರುಗಲಿರುವ ಗುಡೇಕೋಟೆ ಉತ್ಸವದಲ್ಲಿ ಸರ್ವರೂ ಸಹಕರಿಸುವ ಮೂಲಕ, ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಕರೆ ನೀಡಿದರು. ಅವರು ಜ 28ರಂದು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗುಡೇಕೋಟೆ ಉತ್ಸವವನ್ನು ಬಹು ಅದ್ಧೂರಿ, ಹಾಗೂ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ತಾಲೂಕಿನ ಸರ್ವರೂ ಬದ್ಧತೆಯಿಂದ, ಸ್ವಯಂ ಪ್ರೆರಣೆಯಿಂದ ಶ್ರಮಿಸಬೇಕು ಹಾಗೂ ಸಹಕರಿಸಬೇಕಿದೆ ಎಂದರು. ತಾಲೂಕಿನ ಗತವೈಭವ ಸಾರುವ ಗುಡೆಕೋಟೆ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು, ಸಂಬಂಧಿಸಿದ ಇಲಾಖಾಧಿಕಾರಿಗಳು ಅಗತ್ಯ ಪೂರ್ವ ತಯಾರಿ ನಡೆಸಬೇಕೆಂದು ಸೂಚಿಸಿದರು.
ವೀರ ವನಿತೆ ಒನಕೆ ಓಬವ್ವರವರ ತವರು ಮನೆಯಾದ ಗುಡೆಕೋಟೆಯ ಉತ್ಸವ, ಕೂಡ್ಲಿಗಿ ತಾಲೂಕಿನ ಪ್ರತಿಷ್ಠೆಯ ಉತ್ಸವವಾಗಿದೆ.
ಫೆಬ್ರವರಿ24 ಮತ್ತು 25 ರಂದು ನಡೆಯಲಿರುವ ಗುಡೆಕೋಟೆ ಉತ್ಸವವನ್ನು, ಬಹು ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಯಿತು. ಸ್ವಾಗತ ಮತ್ತು ಶಿಷ್ಟಾಚಾರ, ಸಾರಿಗೆ, ವಸತಿ, ಆಹಾರ, ಮಾಧ್ಯಮ, ಪೊಲೀಸ್ ಭದ್ರತೆ, ಮೂಲಭೂತ ಸೌಲಭ್ಯಗಳು. ಮತ್ತು ನೀರಿನ ವ್ಯವಸ್ಥೆ, ನೈರ್ಮಲ್ಯತೆ ವೇದಿಕೆ ನಿರ್ವಹಣೆ ಸೇರಿದಂತೆ, ಸುವ್ಯವಸ್ಥಿತವಾಗಿ ಉತ್ಸವದ ಕಾರ್ಯಕ್ರಮ ನಡೆಸಲು ಅಗತ್ಯ ಯೋಜನೆ ರೂಪಿಸಲಾಯಿತು.
ಇಲಾಖೆಗಳು ಸಂಘ ಸಂಸ್ಥೆಗಳ ಜನಪ್ರತಿನಿಧಿಗಳ ಗಣ್ಯಮಾನ್ಯರ ಸಹಕಾರ, ಹಾಗೂ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ನಿರ್ಣಯಿಸಲಾಯಿತು.
ಪ್ರಥಮವಾಗಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕಾಗಿದ್ದು, ವಿವಿಧ ಸ್ಥಳೀಯ ಕಲೆಗಳಿಗೆ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಉತ್ಸವದ ಸಂಪೂರ್ಣ ಯಶಸ್ವಿಗೆ, ಎಲ್ಲಾ ಮುಖಂಡರು ಒಳಗೊಂಡಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದರು. ಸಭೆಯಲ್ಲಿ ತಹಶಿಲ್ದಾರರಾದ ಎಮ್.ರೇಣುಕಮ್ಮ, ತಾಪಂ ಕಾರ್ಯನಿರ್ವಹಣಾಧಿಕಾರಿ ನಂಜಪ್ಪ. ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಸೇರಿದಂತೆ ವಿವಿದ ಜನಪ್ರತಿನಿಧಿಗಳು, ವಿವಿದ ಸಮುಫಾಯಗಳ ಮುಖಂಡರು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗಣ್ಯರು, ತಾಲೂಕು ನೌಕರರ ಸಂಘ ಅಧ್ಯಕ್ಷ ವೆಂಕಟೇಶ್. ಗುಡೆಕೋಟೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗುಡೇಕೋಟೆಯ ಹಲವು ಮುಖಂಡರು ಉಪಸ್ಥಿತರಿದ್ದರು.