

ಮಾರ್ಚ್-3
ದಾವಣಗೆರೆಯ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸುತ್ತಿರುವ ಹಳೆ ಬಸ್ ಸ್ಟ್ಯಾಂಡ್ ನ ಕಾಮಗಾರಿಯನ್ನು ಜನಪ್ರಿಯ ಸಂಸದರಾದ ಜಿ. ಎಂ. ಸಿದ್ದೇಶ್ವರ್ ಹಾಗೂ ಶಾಸಕರಾದ ಎಸ್ಎ ರವೀಂದ್ರನಾಥ್ ಅವರು ಭೇಟಿಕೊಟ್ಟು ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ, ಏಪ್ರಿಲ್ ತಿಂಗಳಲ್ಲಿ ಉದ್ಘಾಟಿಸುವಂತೆ ಸ್ಮಾರ್ಟ್ ಸಿಟಿ ಎಂ ಡಿ ಮಲ್ಲಾಪುರ ಅವರಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ದೂಡ ಅಧ್ಯಕ್ಷರಾದ ದೇವರಮನೆ ಶಿವಕುಮಾರ್ ರವರು, ನಿಕಟಪೂರ್ವ ಮಹಾಪೌರರಾದ ಎಸ್. ಟಿ. ವೀರೇಶ್ ರವರು ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾದವ್ ಅವರು ಮಹಾನಗರ ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ಪಕ್ಷದ ಹಿರಿಯ ಮುಖಂಡರು ಇದ್ದರು.