ಹಳೇ ಕುಂದುವಾಡದಲ್ಲಿ ಪ್ರತಿಭಾ ಪುರಸ್ಕಾರ, ಬೆಳ್ಳಿ ಕಪ್ ವಿತರಣೆ..ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ; ಶಾಸಕ ಬಸವಂತಪ್ಪ..

ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್, ಜನತಾ ರಕ್ಷಣಾ ವೇದಿಕೆಯ ಆರನೇ ವಾರ್ಷಿಕೋತ್ಸವ ಬೆಳ್ಳಿ ಕಪ್ ಪ್ರಶಸ್ತಿ ಪ್ರದಾನ ಸಮಾರಂಭ, ಸರ್ಕಾರಿ ಶಾಲೆ, ಕಾಲೇಜಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಟಾಪರ್ ಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಯಕೊಂಡ ಶಾಸಕ ಬಸವಂತಪ್ಪ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಮಹತ್ವದ ಕೆಲಸವಾಗಿದೆ, ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುವುದು ಅವಶ್ಯಕವಾಗಿದೆ, ಮನಾ ಯುವ ಬ್ರಿಗೇಡ್ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯವಾಗಿದೆ, ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ಕೊಡಬೇಕಿದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು, ಎಷ್ಟೆ ಡಿಗ್ರಿಗಳನ್ನು ಓದಿದವರು, ಮಾನವೀಯತೆ ಸಹಾಯ ಗುಣ ಇಲ್ಲ ಎಂದರೆ ಉಪಯೋಗವಿಲ್ಲ ಎಂದು ಕಿವಿ ಮಾತು ಹೇಳಿದರು..

ನಾನು ಕುಂದುವಾಡ ಮಣ್ಣಿನ ಮಗ..!

ನಾನು ಹಳೇ ಕುಂದುವಾಡದ ಮಣ್ಣಿನ ಮಗ, ನನ್ನದು ಮೂಲತ ಇದೇ ಊರು, ನಾವು ಹುಟ್ಟಿ ಬೆಳೆದಿದ್ದು ಇದೇ ಊರಿನಲ್ಲಿ, ಬಳಿಕ ಗಾಂಧಿ ನಗರಕ್ಕೆ ಹೋದೆವು, ನನ್ನ ಹೆಸರು KS ಬಸವಂತಪ್ಪ, K ಎಂದರೆ ಕುಂದುವಾಡ, S ಎಂದರೆ ನಮ್ಮ ತಂದೆಯ ಹೆಸರು ಸಂಗಪ್ಪ, ಮಾಜಿ ಸಚಿವ ಹೆಚ್ ಆಂಜನೇಯ ನನ್ನ ಮಾವ, ಹೆಚ್ ಆಂಜನೇಯ ಅವರು ಹಳೇ ಕುಂದುವಾಡದಲ್ಲಿ ಶಾಲೆ ಆರಂಭಿಸಿದ್ದರು, ಸೈಕಲ್ ನಲ್ಲಿ ಬಂದು ಶಾಲೆ ನಡೆಸುತ್ತಿದ್ದರು, ಇನ್ನೂ ನನ್ನ ಹುಟ್ಟೂರು ಕುಂದುವಾಡಕ್ಕೆ ಬರಬೇಕು ಅಂದುಕೊಂಡಿದ್ದೆ, ಮನಾ ಯುವ ಬ್ರಿಗೇಡ್ ವೇದಿಕೆಯವರು ನನ್ನನ್ನೂ ಕರೆಯಿಸಿ ಗೌರವಿಸಿದ್ದು ಮರೆಯಲಾಗದ ಕ್ಷಣ ಎಂದು ಹಳೇ ನೆನಪು ಮೆಲುಕು ಹಾಕಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಮನಾ ಯುವ ಬ್ರಿಗೇಡ್, ಜರವೇ ಯಿಂದ ಪ್ರತಿ ವರ್ಷ ಕೆಪಿಎಲ್ ಟೂರ್ನಿ ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ, ಸಂತೋಷದಿಂದ ಸೌಹಾರ್ದಯುತವಾಗಿ ಸಾಮರಸ್ಯದಿಂದ ಕ್ರಿಕೆಟ್ ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಈ ಭಾರೀ ರಾಜ್ಯದಲ್ಲೇ ಮೊದಲ ಭಾರೀಗೆ ಬೆಳ್ಳಿ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದರು..

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಸಾರ್ಥಕ ಕೆಲಸ, ಅವರ ಭವಿಷ್ಯಕ್ಕೆ ಇಂತಹ ಕಾರ್ಯಕ್ರಮಗಳು ಬುನಾದಿ, ವಿದ್ಯಾರ್ಥಿಗಳು ಛಲದಿಂದ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು..

ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ, ಕಾಲೇಜಿನ ಎಸ್ ಎಸ್ ಎಲ್ ಸಿ, ಪಿಯುಸಿ 36 ಟಾಪರ್ ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು, ಬೆಳ್ಳಿ ಕಪ್ ವಿತರಣೆ ಸಮಾರಂಭ ನಡೆಯಿತು, ಪವರ್ ಫೈಟರ್ಸ್ ಪ್ರಥಮ, ಕುಂದುವಾಡ ಯೋದಾಸ್ ತಂಡ ದ್ವಿತೀಯ, ಆರ್ ಎಕ್ಸ್ ಟಗರು ತಂಡ ತೃತೀಯ ಬಹುಮಾನ ಸ್ವೀಕಾರ ಮಾಡಿತು.

ವೇದಿಕೆ ಅಧ್ಯಕ್ಷ ಮಧುನಾಗರಾಜ್ ಕುಂದುವಾಡ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಮಾಜಿ ಕಾರ್ಪೋರೇಟರ್, ಹೆಚ್ ತಿಪ್ಪಣ್ಣ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಲೋಕಿಕೆರೆ ಮಂಜುನಾಥ್, ಸಣ್ಣಿಂಗಪ್ಪ, ಮಲ್ಲಿಕಾರ್ಜುನ್, ಕೆಂಪುನಿಂಗಪ್ಪರ ಮಂಜಪ್ಪ, ಬೆಳ್ಳೂಡಿ ಮಂಜಪ್ಪ, ಬಾರಿಕರ ಚಂದ್ರಪ್ಪ, ನರಸಪ್ಪರ ಶಿವಪ್ಪ, ನರಸಪ್ಪರ ಲಿಂಗರಾಜ್, ಸಂಪತ್ ಕುಮಾರ್, ಪ್ರಭು, ಬೆಳ್ಳೂಡಿ ಕುಮಾರ್, ಡಿಜಿ ಪ್ರಕಾಶ್, ರಾಜೂ ಕರೂರು, ನಾಗರಾಜ್ ಎಸ್ ಬಿ, ಸಿದ್ದಲಿಂಗಪ್ಪ, ಹನುಮಂತಪ್ಪ, ಅಂಗಡಿ ಸಂಗಪ್ಪ, ಅಣ್ಣಪ್ಪ, ಕರಿಬಸವರಾಜ್ ಸೇರಿದಂತೆ ಮತ್ತಿತರರಿದ್ದರು..

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!