


ದಾವಣಗೆರೆ: ಮಕ್ಕಳು ಮತ್ತು ಮಹಿಳೆಯರಿಗೆ ಟೈಕ್ಟಾಂಡೋ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಸೀಮಿತವಾಗದೇ ಕ್ರೀಡೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿಯವರು ತಿಳಿಸಿದರು..
ನಗರದ ಗುರುಭವನದಲ್ಲಿ ದಾವಣಗೆರೆ ಜಿಲ್ಲೆಯ ಟೈಕ್ಟಾಂಡೋ ಸಂಸ್ಥೆಯಡಿಯಲ್ಲಿ ನಡೆದ ಕಲರ್ ಬೆಲ್ಟ್ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಸೀಮಿತವಾಗಿ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವಂತಹ ಸ್ಥಿತಿ ಬರಲಿದ್ದು, ಈಗಿನಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜಸೇವಕ ನಂದಿಗಾವಿ ಶ್ರೀನಿವಾಸ, ಬಾ ಜ ಪ ಎಸ್ ಸಿ ಮೊರ್ಚ ಉಪಾಧ್ಯಕ್ಷ ರಾಘವೇಂದ್ರ, ಕೊಂಡಜ್ಜಿ ಸಮಾಜ ಸೇವಕ ಸಿದ್ದೇಶ ಬೆಳ್ಳೊಡಿ, ಚಿತ್ರದುರ್ಗ ಜಿಲ್ಲಾ ಟೈಕ್ಟಾಂಡೋ ಸಂಸ್ಥೆಯ ಕಾರ್ಯದರ್ಶಿ ವಿಶ್ವಕರ್ಮಚಾರಿ, ಅಂತರಾಷ್ಟ್ರೀಯ ತರಬೇತಿದಾರ ಐಓಮೂರ್ತಿ, ಹರೀಶ್, ಪ್ರವೀಣ್ ಜಿ ವಿ ಅಧ್ಯಕ್ಷರು ದಾವಣಗೆರೆ ಜಿಲ್ಲಾ ಟೈಕ್ಟಾಂಡೋ ಸಂಸ್ಥೆ, ಪ್ರಭಾಕರ ದಿನೇಶ ರಮೇಶ ತರಬೇತಿದಾರರು ಉಪಸ್ಥಿತರಿದ್ದರು.
ವೀರೇಶ್ ಅಜ್ಜಣ್ಣನವರು ಸ್ವಾಗತಿಸಿದರು. ಪ್ರಾರ್ಥನೆ ಚಂದನ , ನಿರೂಪಣೆ ಡಾಕ್ಟರ್ ಹನುಮಂತ ರಾಜುರವರು ಹಾಗೂ ವಂದನರ್ಪಣೆಯನ್ನು ಶ್ರೀನಿವಾಸ್ ರವರು ನೆರವೇರಿಸಿದರು.