

ಕೊಪ್ಪಳ ಸೆಪ್ಟೆಂಬರ್ 15: ಸಂಸದರಾದ ಕರಡಿ ಸಂಗಣ್ಣ ಅವರು ಸೆಪ್ಟೆಂಬರ್ 15ರಂದು ಕೊಪ್ಪಳ ಸಿಟಿ ಸಂಚಾರ ನಡೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿದರು.
ಕೊಪ್ಪಳ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರದ ರೈಲ್ವೆ ಗೇಟ್ ನಂ.63 ಸ್ಥಳಕ್ಕೆ ಹಾಗೂ ಕೆ.ಇ.ಬಿ ಹತ್ತಿರದ ರೈಲ್ವೆ ಗೇಟ್ ನಂಬರ್ 65ಕ್ಕೆ ಭೇಟಿ ನೀಡಿ ಅಲ್ಲಿನ ಕಾಮಗಾರಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ರೈಲ್ವೆ ಗೇಟ್ ನಂ.63ರಲ್ಲಿ ತ್ವರಿತಗತಿಯಲ್ಲಿ ಕೆಳ ಸೇತುವ ಕಾಮಗಾರಿಯನ್ನು ಪ್ರಾರಂಭಿಸಲು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೆ ಗೇಟ್.ನಂ.65ರಲ್ಲಿ ಕೆಳಸೇತುವೆ ನಿರ್ಮಾಣ ಮಾಡಲು ಬೇಕಾಗಿರುವ ಭೂಸ್ವಾಧೀನಕ್ಕೆ ಈಗಾಗಲೇ ಹಣ ಮಂಜೂರಾಗಿದ್ದು, ತ್ವರಿತಗತಿಯಲ್ಲಿ ಭೂಸ್ವಾಧೀನ ಮಾಡಿ ಜಾಗೆಯನ್ನು ನೇರವಾಗಿ ಖರೀದಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ಕೊಪ್ಪಳ ತಹಸೀಲ್ದಾರರಾದ ವಿಠ್ಠಲ್ ಚೌಗಲಾ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ವಾರ್ಡ್ ನಂ.26ರ ನಗರಸಭೆ ಸದಸ್ಯರಾದ ದೇವರ ಕಂದಾಗಿ, ಬಸವರಾಜ ಬನ್ನಿಕೊಪ್ಪ, ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ಜಗದೀಶ ಮಾಲಗಿತ್ತಿ, ನೀಲಕಂಠಯ್ಯ ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಆಸೀಫ್, ಕೊಪ್ಪಳ ರೈಲ್ವೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ಮಹೇಶ್ ಮ್ ಶರ್ಮ
ಉತ್ತರ ಕರ್ನಾಟಕದ ವಿಶೇಷ ವರದಿಗಾರರು