

ದಾವಣಗೆರೆ (ಸೆ 16) ಇಂದು ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮದುಜ್ಜಯಿನಿ ಸದ್ಧರ್ಮಸಿಂಹಾಸನಾದೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಅಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 31 ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ
.

ಈ ಸಂದರ್ಭದಲ್ಲಿ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹರಿಹರದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು, ಗೌರಿಗದ್ದೆಯ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ವಿನಯ್ ಗುರೂಜಿ ರವರು,ಹರಿಹರ ಕ್ಷೇತದ ಶಾಸಕರಾದ ಶ್ರೀ ಬಿ.ಪಿ ಹರೀಶ್ ರವರು,ಜಿಲ್ಲಾಧ್ಯಕ್ಷರಾದ ಹನಗವಾಡಿ ವೀರೇಶ್ ರವರು ಹರಿಹರ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ಮಹದೇವಪ್ಪ ಗೌಡ್ರು ರವರು,ಶ್ರೀ ಹೆಚ್.ಎಮ್ ಸಣ್ಣಗೌಡ್ರ ರವರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮೇಶ್ ರವರು ಹಾಗೂ ಗ್ರಾಮದ ಮುಖಂಡರುಗಳು,ಗ್ರಾಮಸ್ಥರು ಉಪಸ್ಥಿತರಿದ್ದರು…
