ದಾವಣಗೆರೆಯ ನಿಂಚನ ಶಾಲೆಯಲ್ಲಿ ವಿದ್ಯಾಥಿಗಳಿಂದ
ವಿಜ್ಞಾನ ವಸ್ತು ಪ್ರದರ್ಶನ

ದಾವಣಗೆರೆ : ನಗರದ ನಿಟ್ಟುವಳ್ಳಿಯಲ್ಲಿರುವ ನಿಂಚನ ಪಬ್ಲಿಕ್ ಸ್ಕೂಲ್‍ನಲ್ಲಿ ಶಾಲೆಯ ಎಲ್‍ಕೆಜಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಶೆಜ್ಞಾನಿಕ ಜ್ಞಾನದ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಇಂದು ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿದ್ದ ಒಟ್ಟು 28 ವಿವಿಧ ಮಾದರಿಗಳಲ್ಲಿ ವಿಜ್ಞಾನದ ಮಾದರಿಗಳು ದೈನಂದಿನ ಕೃಷಿ ಚಟುವಟಿಕೆಗಳಲ್ಲಿ ಬಳಸುಬಹುದಾದ ಮತ್ತು ಗೃಹಪಯೋಗಿ, ಪರಿಸರ ಸ್ನೇಹಿ ಹಾಗೂ ಜನರ ಬದುಕಿಗೆ ಪೂರಕವಾಗಿದ್ದವು. ವಿದ್ಯಾರ್ಥಿಗಳು ತಂಡವಾಗಿ ತಾವು ತಯಾರಿಸಿದ ಮಾದರಿಗಳ ಉದ್ದೇಶ, ಉಪಯುಕ್ತತೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.

ಯುಕೆಜಿಯ ನಾಲ್ವರು ಪುಟಾಣಿ ಮಕ್ಕಳ ಕಾಡು ಪ್ರಾಣಿಗಳ ಪರಿಚಯದ ಮಾದರಿ ಆ ಪ್ರಾಣಿಗಳ ನೆನಪಿಸಿದವು. ಎಲ್‍ಕೆಜಿಯ ನಾಲ್ವರು ಮಕ್ಕಳು ಬಾಯಾರಿದ ಕಾಗೆ ಮಡಿಕೆಯಲ್ಲಿ ಅಳಿದುಳಿದ ನೀರನ್ನು ಕಲ್ಲುಗಳ ಹಾಕಿ ದಾಹ ನೀಗಿಸಿಕೊಳ್ಳುವ ಮಾದರಿಯು ನೀತಿ ಪಾಠವನ್ನೂ ತಿಳಿಸುವಂತಿದ್ದವು. ಈ ಎಲ್ಲಾ ಮಾದರಿಗಳು ಆಕರ್ಷಿಸಿದವು.

1ನೇ ತರಗತಿಯ ಮಕ್ಕಳ ಹನಿ ನೀರಾವರಿ ಮಾದರಿ, 2ನೇ ತರಗತಿಯ ಮಕ್ಕಳ ಭೂಮಿ ಮತ್ತು ಪ್ರಕೃತಿ ಉಳಿಸಿ ಮಾದರಿಯ ಸಂದೇಶ, 3ನೇ ತರಗತಿಯ ಮಕ್ಕಳ ನೀರಿನ ಮಾಲಿನ್ಯ, 3ನೇ ತರಗತಿಯ ಮಕ್ಕಳ ನೀರಿನ ಆವಿ, 4ನೇ ತರಗತಿಯ ಮಕ್ಕಳು ಸೌರ ವಿದ್ಯುತ್, 5ನೇ ತರಗತಿಯ ಮಕ್ಕಳ ಮಳೆ ನೀರು ಕೊಯ್ಲು ಮಾದರಿ ಮತ್ತು ಕೃಷಿ ಉಪಕರಣಗಳ ಪ್ರದರ್ಶನ, ಸೂರ್ಯ ಮತ್ತು ಚಂದ್ರ ಗ್ರಹಣಗಳು ಗಮನ ಸೆಳೆದವು.

6ನೇ ತರಗತಿಯ ಮಕ್ಕಳ ನೀರಿನ ಚಕ್ರ, ಸೌರ ಮಂಡಲ, ಗಾಳಿ ಗಿರಣಿ, 7ನೇ ತರಗತಿಯ ಹೈಡ್ರೊಲಿಕ್ ಜೆಸಿಬಿ, ಮಾನವನ ಹೃದಯ ಬಡಿತದ ಪ್ರಕ್ರಿಯೆ, ಮಾನವನ ಜೀರ್ಣಾಂಗ ಪ್ರಕ್ರಿಯೆ, 8ನೇ ತರಗತಿಯ ಜಲ ವಿದ್ಯುತ್ ಸ್ಥಾವರ, ವಿದ್ಯುತ್ ಇಲ್ಲದೆ ನೀರು ಸರಬರಾಜು, ಹೊಲೊಗ್ರಾಮ್ ಬಾಕ್ಸ್, ಅಣೆಕಟ್ಟು ನೀರಾವರಿ, ಮಳೆ ನೀರು ಕೊಯ್ಲು, 8ನೇ ತರಗತಿಯ ಪುನಶ್ಚೇತನ ವ್ಯವಸ್ಥೆ, ಮೂತ್ರಪಿಂಡದ ಕೆಲಸದ ಮಾದರಿ, ಶೋಧನೆ ಮತ್ತು ಅವುಗಳ ಉಪಯೋಗಗಳು, ವೈರ್ಲೆಸ್ ಪವರ್ ಟ್ರಾನ್ಸ್ಪೋರ್ಟರ್, 9ನೇ ತರಗತಿ ಮಕ್ಕಳ ವಿಜ್ಞಾನ ಸಂಶೋಧನೆಗಳ ಪ್ರಯೋಗಗಳು, ವಿದ್ಯುತ್ ಸಕ್ರ್ಯೂಟ್ ಕಾರ್ಯದ ಮಾದರಿಗಳು ಇದ್ದವು.
ತಮ್ಮ ಮಕ್ಕಳ ವಿವಿಧ ಮಾದರಿಗಳ ಪ್ರದರ್ಶವನ್ನು ವೀಕ್ಷಿಸಿ ಮಕ್ಕಳ ವಿಜ್ಞಾನದ ಪ್ರತಿಭೆಗೆ ಸಂತಸಪಟ್ಟರು.

ನಿಮ್ಮ ವಿಜ್ಞಾನದ ಸಾಧನೆ ಸಮಾಜಕ್ಕೆ ವ್ಶೆಜ್ಞಾನಿಕ ಕೊಡುಗೆ ನೀಡಲಿ
2021-22ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಪ್ಪೇಶಪ್ಪ ಅವರು ಚಾಲನೆ ನೀಡಿ ವಿಜ್ಞಾನ ವಸ್ತುಪ್ರದರ್ಶನದಲ್ಲಿದ್ದ ಪ್ರತಿಯೊಂದು ಮಾದರಿಗಳ ವೀಕ್ಷಿಸಿ ಮಕ್ಕಳಿಂದ ಮಾಹಿತಿ ಪಡೆದರು. ಪ್ರತಿಯೊಬ್ಬ ಮಕ್ಕಳಲ್ಲೂ ವ್ಶೆಜ್ಞಾನಿಕ ಶಕ್ತಿ ಅಡಗಿದ್ದು, ವಿಜ್ಞಾನದ ಜ್ಞಾನ ಅರಳಿದಾಗ ಸಮಾಜಕ್ಕೆ ವ್ಶೆಜ್ಞಾನಿಕ ಕೊಡುಗೆ ನೀಡಬಹುದಲ್ಲದೇ, ತಾವೂ ಎತ್ತರ ಗುರಿಯನ್ನು ಸಾಧಿಸಬಹುದು. ಹಿರಿಯ ವಿಜ್ಞಾನಿ ಅಬ್ದುಲ್ ಕಲಾಂ, ನುರಿತ ವಿಜ್ಞಾನಿ ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ಚೇತನಗಳು ತಮ್ಮ ಪ್ರತಿಭೆಯ ಮುಖೇನ ಸಮಾಜಮುಖಿಯಾದ ಕೊಡುಗೆ ನೀಡಿ ತಾವೂ ಸಹ ಜನಮಾನಸದಲ್ಲಿ ನೆಲೆಸಿದ್ದಾರೆ. ಇಂತಹ ಮಹಾನೀಯರನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಪ್ಪೇಶಪ್ಪ ಅವರು ತಿಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿಂಚನ ಶಾಲೆಯ ಅಧ್ಯಕ್ಷ ಎಸ್. ನಿಂಗಪ್ಪ ಮಾತನಾಡಿ, ಮಕ್ಕಳಲ್ಲಿ ವ್ಶೆಜ್ಞಾನಿಕ ಮನೋಭಾವನೆ ಹಾಗೂ ವಿಜ್ಞಾನದ ಜ್ಞಾನ ಬಿತ್ತುವ ಸಲುವಾಗಿ ಕೇವಲ ಪಠ್ಯ ಬೋದನೆಗಷ್ಟೇ ಸೀಮಿತವಾಗಿಸದೇ ಮಕ್ಕಳೇ ಸ್ವತಹ ಮಾದರಿಗಳನ್ನು ತಯಾರಿಸಿ ಪ್ರಾಯೋಗಿಕ ಪ್ರದರ್ಶನಕ್ಕೆ ಒತ್ತು ನೀಡಿದ್ದೇವೆ ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಶಿವಲಿಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಕನ್ನಡ ವಿಷಯ ಸಂಪನ್ಮೂಲ ಅಧಿಕಾರಿ ಕುಮಾರ್ ಸಾರಥಿ, ವಿಜ್ಞಾನ ಸಂಪನ್ಮೂಲ ಅಧಿಕಾರಿ ವಸಂತ ಕುಮಾರಿ, ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಂ. ಭರತ್, ನಿಂಚನ ಪಬ್ಲಿಕ್ ಸ್ಕೂಲ್ ಮತ್ತು ಬೆಳ್ಳೂಡಿ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲರಾದ ಕೃತಿ ಇನಾಂದಾರ್, ಶಾಲೆಯ ಆಡಳಿತಾಧಿಕಾರಿ ನಸ್ರಿನ್ ಖಾನ್, ಕೋ ಆರ್ಡಿನ್ಭೆಟರ್‍ಗಳಾದ ಎಂ.ಎಸ್. ರೂಪ, ಬಿ.ಕೆ. ಗೀತಾ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದರು

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!