

ದಾವಣಗೆರೆ: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಕಾಲೇಜಿನ ಪ್ರಾಚಾರ್ಯ ಹಾಗೂ ಸಂಘದ ಗೌರವಾಧ್ಯಕ್ಷ ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಸಿ. ಮೌನೇಶಾಚಾರ್ ವಾರ್ಷಿಕ ವರದಿ ವಾಚಿಸಿದರು, ಸಂಘದ ಅಧ್ಯಕ್ಷ ಎನ್. ನಾಗೇಶ್, ಪದಾಧಿಕಾರಿಗಳಾದ ಯು.ಸಿ. ನಾಗರಾಜಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿ ಗುರುಸ್ವಾಮಿ ನಿರೂಪಣೆ ಮಾಡಿದರು.