

ದಾವಣಗೆರೆ ; ಕುಂದುವಾಡ ರಸ್ತೆಯಲ್ಲಿನ ಲೇಕ್ ವಿವ್ ಬಡಾವಣೆಯಲ್ಲಿ ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಹಾಡುಹಗಲೇ ದರೋಡೆ ಮಾಡಿರುವ ಘಟನೆ ಇಂದು ನಡೆದಿದೆ.
ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿರುವ ದರೋಡೆಕೋರನು ಶ್ರೀನಾಥ್ ಎಂಬುವರ ಮನೆಗೆ ನುಗ್ಗಿ
ಶ್ರೀನಾಥ್ ಅವರ ಪತ್ನಿ ಯೊಗೇಶ್ವರಿ ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಅಲ್ಲದೇ, ಮಗನ ಚಿಕಿತ್ಸೆಗೆಂದು ಮನೆಯಲ್ಲಿ ಇಟ್ಟಿದ್ದ ಸುಮಾರು 5 ಲಕ್ಕಕ್ಕೂ ಅಧಿಕ ಹಣವನ್ನು ದೋಚಿ ಪರಾರಿಯಾಗಿದ್ದಾನೆ.
ದರೋಡೆಕೋರನು ಮನೆಗೆ ಎಂಟ್ರಿ ಮತ್ತು ಎಕ್ಸಿಟ್ ಆಗಿರುವ ಚಲನ, ವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದರೋಡೆಕೋರನಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಿಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಾಡುಹಗಲೇ ನಡೆದ ದರೋಡೆಯಿಂದ ಸ್ಥಳೀಯರು, ನಗರದ ಜನರು ಭಯಭೀತರಾಗಿದ್ದಾರೆ.
ಹಲ್ಲೆಯಿಂದ ಗಾಯಾಗೊಂಡಿರುವ ಯೋಗೇಶ್ವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ಲಾಕ್ ಗ್ಯಾಂಗ್ ಎಂದ ದರೋಡೆಕೋರ : ಶ್ರೀನಾಥ್ ಪತ್ನಿ ಯೋಗೇಶ್ವರಿ ಕಸ ಎಸೆಯಲು ಹೋದಾಗ ದರೋಡೆಕೋರ ಮನೆ ಪ್ರವೇಶಿಸಿದ್ದು, ಕಸ ಎಸೆದು ಬರುವಷ್ಟರಲ್ಲಿ ಪುತ್ರ ಸಮರ್ಥ್ ಮೇಲೆ ಹಲ್ಲೆ ಮಾಡಿದ್ದಾನೆ. ಮನೆ ಒಳಗೆ ಬರುತ್ತಿದ್ದಂತೆ ಯೋಗೇಶ್ವರಿಗೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿ ಹಣ ಒಡವೆ ನೀಡುವಂತೆ ದಮಕಿ ಹಾಕಿದ್ದಾನೆ.

ನಾನು ಬ್ಲಾಕ್ ಗ್ಯಾಂಗ್ ನಿಂದ ಬಂದಿದ್ದೇನೆ. ನನ್ನ ಹಿಂದೆ ದೊಡ್ಡ ದೊಡ್ಡವರು ಇದ್ದಾರೆ. ಅವರೇ ನನ್ನ ಕಳಿಸಿದ್ದು ಎಂದು ಹೋಗುವ ವೇಳೆ ದರೋಡೆಕೋರ ಹೇಳಿದ್ದಾನೆ. ಇದ್ಯಾವದಪ್ಪಾ ಬ್ಲಾಕ್ ಗ್ಯಾಂಗ್ ಎಂಬುದಾಗಿ ಪೊಲೀಸರ ನಿದ್ದೆಗೆಡಿಸಿದೆ.