

ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಇಂದು ಪಟ್ಟಣದ ಹಲ್ಯಾಳ ರೋಡ್ನಲ್ಲಿ ಶ್ರೀ ಲಕ್ಷ್ಮಣ ಬಡಿಗೇರ ಅವರ ನೂತನ ಶ್ರೀ ವಿಶ್ವಕರ್ಮ ಅಲ್ಯುಮಿನಿಯ್ಂ ಮತ್ತು ಗ್ಲಾಸ್ ವರ್ಕ್ಸ್ ಶಾಪ್ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮುರುಘರಾಜೇಂದ್ರ ಸ್ವಾಮೀಜಿ, ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀ ಭರಮಗೌಡ (ರಾಜು) ಕಾಗೆ, ಮುಖಂಡರಾದ ಶ್ರೀ ಸದಾಶಿವ ಬುಟಾಳಿ ಸೇರಿದಂತೆ ಇತರರು ಇದ್ದರು.