

ದಾವಣಗೆರೆ : ಹಳೇ ಕುಂದುವಾಡ ಗ್ರಾಮದಲ್ಲಿರುವ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಇಂದಿನಿಂದ (೧ ರಿಂದ ೯) ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.
ಮಾರ್ಚ್ ೧ ರಂದು ಮುಂಜಾನೆ ಅಜ್ಜಯ್ಯನವರ ಅಮೃತ ಅಮೃತ ಶೀಲಾ ಮೂರ್ತಿಗೆ ರುದ್ರಾಭಿಷೇಕ, ಹೋಮ-ಹವನ. ಬೆಳಿಗ್ಗೆ ೧೦.೩೦ ಕ್ಕೆ ಹಳೇ ಕುಂದುವಾಡದ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ
ಜೆ. ರಾಜಣ್ಣ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿದ್ದು,
ಸಂಜೆ ವಿಶೇಷ ಪೂಜೆ ಮತ್ತು ಭಜನೆ ನಡೆಯಲಿದೆ.
ಮಾರ್ಚ್ 2 ರಂದು ಮುಂಜಾನೆ ಅವರಗೋಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ರುದ್ರಾಭಿಷೇಕ, ಅಮವಾಸೆ ವಿಶೇಷ ಪೂಜೆ, ಗುಗ್ಗಳ ನಡೆಯಲಿದೆ ಸಂಜೆ ೭ ಕ್ಕೆ ಕರಿಬಸವೇಶ್ವರ ಸ್ವಾಮಿಯ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ನಡೆಯಲಿದೆ.
ಉದ್ಯಮಿ ಎಸ್ .ಎಸ್. ಗಣೇಶ್ , ದಾವಣಗೆರೆ ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಕೊಗುಂಡೆ ಬಕೇಶಪ್ಪ ಭಾಗವಹಿಸಲಿದರೆ. ಮಾರ್ಚ್ ೩ ರಿಂದ ೮ ರವರೆಗೆ ಕರಿಬಸವೇಶ್ವರ ಸ್ವಾಮಿಗೆ ಪಲ್ಲಹಾರ ಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ೧೨ ಕ್ಕೆ ಮಾತೃಶ್ರೀ ರಾಜಮಾತೆ ಅವರ ಮೂವತ್ತನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು
ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಿಗಂದೂರು ಪುಣ್ಯ ಕ್ಷೇತ್ರದ ಧರ್ಮದರ್ಶಿಗಳ್ಳದ ರಾಮಣ್ಣ ಅವರ ಸಾನಿಧ್ಯದಲ್ಲಿ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಹಳೇ ಕುಂದುವಾಡ ಶ್ರೀ ಕರಿಬಸವೇಶ್ವರ ಸ್ವಾಮಿಯ ಟ್ರಸ್ಟ್ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.