

ದಾವಣಗೆರೆ : ಸೆ 09- ಗೋಣಿವಾಡ ಬಳಿಯ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದಲ್ಲಿ ಸಂಭ್ರಮ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಓಣಂ ಆಚರಣೆ ಮಾಡಲಾಯಿತು.
ಪೋಷಕರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳು ರಾಧೆ ಕೃಷ್ಣನ ವೇಷ ಹಾಕಿಕೊಂಡು ಎಲ್ಲರ ಗಮನ ಸೆಳೆದರು.
ರಾಧೆಯಾದ ವಿದ್ಯಾರ್ಥಿನಿಯರಿಗೆ ಕೃಷ್ಣನ ಪಾತ್ರದಲ್ಲಿ ಬಂದ ವಿದ್ಯಾರ್ಥಿಗಳು ಸಾಥ್ ನೀಡಿದರು. ಶ್ರೀಕೃಷ್ಣ ಹಾಗೂ ಓಣಂ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಶ್ರೀಕೃಷ್ಣನನ್ನ ಸ್ಮರಿಸಿದರು. ಪುಟ್ಟ ಪಟಾಣಿಗಳು ಶ್ರೀಕೃಷ್ಣನಂತೆ ಕಂಗೊಳಿಸುವ ಮೂಲಕ ಶಾಲಾ ವಾತಾವರಣವೇ ಹಬ್ಬದಂತೆ ಮಾರ್ಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರುದ್ರಯ್ಯಜಿ ಆಗಮಿಸಿದ್ದರು. ಈ ವೇಳೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಗೌರವ ಕಾರ್ಯದಶಿಗಳಾದ ಕೆ.ಎಂ ಸುರೇಶ್, ಪ್ರಾಂಶುಪಾಲರಾದ ಶ್ರೀಮತಿ ವೀಣಾ ಪಿ ಹೆಚ್ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.