ಸೆ.9 ರಂದು ಮುಖ್ಯಮಂತ್ರಿಗಳಿಂದ ಧಾರವಾಡ ಜಿಲ್ಲಾ ಪ್ರವಾಸ

ಧಾರವಾಡ ಸೆ.08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 9 ರಂದು ಧಾರವಾಡ ಜಿಲ್ಲೆಗೆ ಆಗಮಿಸಲಿದ್ದಾರೆ.

ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ ಬೆಂಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸುವ ಅವರು ಬೆಳಿಗ್ಗೆ 11-30 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಇರುವ ಕಾರ್ಗಿಲ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವರು. ನಂತರ ಬೆಳಿಗ್ಗೆ 11-50 ಗಂಟೆಗೆ ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸುವರು.

ನಂತರ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳದ ನಿಮಿತ್ಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲಪುಷ್ಪ ಮತ್ತು ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ಮತ್ತು ವೀಕ್ಷಣೆ ಮಾಡುವರು. ನಂತರ ಅವರು ಮಧ್ಯಾಹ್ನ 12-15 ಗಂಟೆಗೆ ಕೃಷಿಮೇಳ ವಸ್ತುಪ್ರದರ್ಶನ ಉದ್ಘಾಟನೆ ಮತ್ತು ವೀಕ್ಷಣೆ ಮಾಡುವರು.

ಮಧ್ಯಾಹ್ನ 12-30 ಗಂಟೆಗೆ ಕೃಷಿಮೇಳದ ಮುಖ್ಯವೇದಿಕೆ ಮೇಲೆ ಕೃಷಿಮೇಳ 2023 ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಕೃಷಿ ವಿದ್ಯಾಲಯದಿಂದ ರಸ್ತೆ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….

  • Related Posts

    ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ;

    ಜಿಲ್ಲೆಯ ಪ್ರತಿ ಆರ್.ಎಸ್ ಕೆ.ದಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿ ನಿರ್ವಹಿಸಲು ನಿರ್ದೇಶನ ನೀಡಿದ ಡಿಸಿ. ಧಾರವಾಡ ಜ.31: ಇಂದು ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ…

    ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಸಭೆ…

    Leave a Reply

    Your email address will not be published. Required fields are marked *

    error: Content is protected !!