

ಚಾಮರಾಜನಗರ (05/09/2023 ) ಹನೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹನೂರು ತಾಲ್ಲೂಕು ವ್ಯಾಪ್ತಿಯ ಪಂಚಾಯತ್ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆಗಾಗಿ ರಚಿಸಲಾಗುತ್ತಿರುವ ಸಮಿತಿ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು
ಗ್ರಾಮ ಪಂಚಾಯತ್ ಮಟ್ಟದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಮಿತಿ ಸದಸ್ಯರು , ಹಾಗೂ MBKs ಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಸಮಿತಿ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು, ಕಾರ್ಯಾಗಾರವನ್ನು ಮಾಸ್ಟರ್ ಟ್ರೈನರ್ ರಾದ ಶ್ರೀರವೀಂದ್ರ ಸಹಾಯಕ ನಿರ್ದೇಶಕರು ಹನೂರು ತಾಲ್ಲೂಕು ಪಂಚಾಯತ್ ರವರು ನಡೆಸಿದರು.

ಈ ಸಂದರ್ಭದಲ್ಲಿ SBM(G) ಜಿಲ್ಲಾ ಐಇಸಿ ಸಮಾಲೋಚಕರು ತಾಲ್ಲೂಕು NRLM ಸಿಬ್ಬಂದಿ, ಹಾಗೂ ತಾ ಪಂ ಸಿಬ್ಬಂದಿಗಳು ವರ್ಗದವರು ಉಪಸ್ಥಿತರಿದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….