

ಬೆಂಗಳೂರು, ಸೆ, ೩: ರಾಜರಾಜೇಶ್ವರಿ ನಗರದಲ್ಲಿನ ಮಹಿಳೆಯರ ಆಕರ್ಷಕ ಆಭರಣ ಮಳಿಗೆ ಪ್ರವೀಣ್ ಜುವೆಲ್ಸ್ ಅರ್ಥಪೂರ್ಣವಾಗಿ ತನ್ನ ಆರನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು.
ಅನ್ನದಾನ, ಸಮಾಜ ಸೇವಾ ಚಟುವಟಿಕೆ ಮೂಲಕ ಆರ್.ಆರ್.ನಗರದ ಪ್ರವೀಣ್ ಜುವೆಲ್ಸ್ ನ ಆರನೇ ವಾರ್ಷಿಕೋತ್ಸವ ಆಚರಣೆ; ಚಿನ್ನ, ಬೆಳ್ಳಿ, ವಜ್ರದ ಆಭರಣದ ಮೇಲೆ ಆಕರ್ಷಕ ರಿಯಾಯಿತಿ
ಆಭರಣ ಖರೀದಿಗೆ ಹಲವು ರಿಯಾಯಿತಿ ಜೊತೆಗೆ ಅನ್ನದಾನ, ಮ್ಯಾರಥಾನ್ ಓಟ, ಮತ್ತಿತರೆ ಸಮಾಜ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಚಿತ್ರನಟಿ ರಚಿತಾ ರಾಂ ಸಂಭ್ರಮಾಚರಣೆಯಲ್ಲಿ ಭಾಗಿಯಾದರು.

ನಂತರ ಮಾತನಾಡಿದ ರಚಿತಾ ರಾಂ, ಮದುವೆ ಹಂಗಾಮು ಇರುವ ಹಿನ್ನೆಲೆಯಲ್ಲಿ ರಿಯಾಯಿತಿ ನೀಡುತ್ತಿರುವುದರಿಂದ ವಧು ವರರಿಗೆ ವರದಾನವಾಗಿದೆ. ಇದೇ ತಿಂಗಳ ೧೦ ರ ವರೆಗೆ ಹಲವು ರಿಯಾಯಿತಿ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರವೀಣ್ ಜುವೆಲ್ಲರ್ಸ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ ರಿತೇಶ್ ಜೈನ್ ಮಾತನಾಡಿ, ಪ್ರತಿಗ್ರಾಂ ಚಿನ್ನದ ಮೇಲೆ ೬೬ ರೂ , ಪ್ರತಿ ಕೆ.ಜಿ. ಬೆಳ್ಳಿ ಮೇಲೆ ೧೬೬೬ ರೂ, ಪ್ರತಿ ಕ್ಯಾರೇಟ್ ವಜ್ರದ ಮೇಲೆ ೬೬೬೬ ರೂ ರಿಯಾಯಿತಿ ನೀಡಲಾಗುತ್ತಿದೆ. ಪ್ರವೀಣ್ ಜುವೆಲ್ಸ್ ೧೯೭೫ ರಿಂದ ಬೆಂಗಳೂರಿನಲ್ಲಿ ತನ್ನ ವ್ಯಾಪಾರ ಆರಂಭಿಸಿದ್ದು, ರಾಜಾಜಿನಗರ, ವಿಜಯನಗರ, ಆರ್.ಆರ್.ನಗರ ಮತ್ತು ಪದ್ಮನಾಭ ನಗರದಲ್ಲಿ ಮಳಿಗೆಗಳಿವೆ. ಮುಂದಿನ ವರ್ಷದ ಜನವರಿಯಲ್ಲಿ ನಗರದಲ್ಲಿ ಮತ್ತೊಂದು ಮಳಿಗೆ ಪ್ರಾರಂಭಿಸುತ್ತಿರುವುದಾಗಿ ಹೇಳಿದರು.
ಪ್ರವೀಣ್ ಜುವೆಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಗನ್ನಾ ಮಾತನಾಡಿ, ಆರನೇ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿ ಆಚರಿಸಲಾಗಿದೆ. ಬರುವ ದಿನಗಳಿಂದ ಸಮಾಜವೇವಾ ಚಟುವಟಿಕೆಯನ್ನು ಮುಂದುವರೆಸುವುದಾಗಿ ಹೇಳಿದರು