

ರಕ್ಷಿತ್ ಶೆಟ್ಟಿ ಹಾಗೂ ರುಕ್ಷಿಣಿ ವಸಂತ್ ಜೋಡಿ ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗೋಕೆ ಶುರುವಾಗಿದೆ. ಮೊದಲ ದಿನ ಸಿನಿಮಾದ ಕಲೆಕ್ಷನ್ ಹೇಳಿಕೊಳ್ಳುವಂತೇನು ಇರಲಿಲ್ಲ. ಆದ್ರೀಗ ಎರಡನೇ ದಿನ ಹಾಗೂ ಮೂರನೇ ದಿನ ಗಳಿಕೆಯಲ್ಲಿ ಏರಿಕೆ ಕಂಡಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಪಕ್ಕಾ ಲವ್ ಸ್ಟೋರಿಯಾಗಿದ್ದರೂ, ಇದೊಂದು ಭಾವನಾತ್ಮಕ ಜರ್ನಿ ಎಂದು ಸಿನಿಮಾ ನೋಡಿದ ಪ್ರೇಕ್ಷಕರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಕ್ಲಾಸ್ ಸಿನಿಮಾ. ಹೀಗಾಗಿ ಬಾಕ್ಸಾಫೀಸ್ ಕಲೆಕ್ಷನ್ ನಿಧಾನವಾಗಿದ್ದರೂ ಲಾಂಗ್ ರನ್ ಇರುತ್ತೆ.
ಸದ್ಯ ಮೊದಲೇ ದಿನಕ್ಕಿಂತ ಎರಡನೇ ದಿನದ ಕಲೆಕ್ಷನ್ ಚೆನ್ನಾಗಿದೆ. ವೀಕೆಂಡ್ ಆಗಿದ್ದರಿಂದ ಕುಟುಂಬ ಸಮೇತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡುವುದಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಸಿನಿಮಾಗೆ ರೆಸ್ಪಾನ್ಸ್ ಅದ್ಭುತವಾಗಿದೆ.
2ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
‘ಸಪ್ತ ಸಾಗರದಾಚೆ ಎಲ್ಲೋ’ ಬಾಕ್ಸಾಫೀಸ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್ ಕಣ್ಣಿಟ್ಟಿದ್ದಾರೆ. ಹೀಗಾಗಿ ಮೊದಲನೇ ದಿನವೇ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಅದೇ ಎರಡನೇ ದಿನ ಗಳಿಕೆಯಲ್ಲಿ ಏರಿಕೆ ಕಂಡಿದೆ. ಮೌತ್ ಪಬ್ಲಿಸಿಟಿಯಿಂದ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಹೀಗಾಗಿ ಶನಿವಾರ (ಸೆಪ್ಟೆಂಬರ್ 2) ಎರಡನೇ ದಿನ ಸುಮಾರು 4 ರಿಂದ 4.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.

2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
‘ಸಪ್ತ ಸಾಗರದಾಚೆ ಎಲ್ಲೋ’ ಮಾಸ್ ಸಿನಿಮಾ ಅಲ್ಲ. ಇದೊಂದು ಕ್ಲಾಸ್ ಸಿನಿಮಾ ಆಗಿರೋದ್ರಿಂದ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಆರಂಭದಲ್ಲಿ ಸ್ಲೋ ಆಗಿರುತ್ತೆ. ಸದ್ಯ ಸಿನಿಮಾ ಬಗ್ಗೆ ವರ್ಲ್ ಆಫ್ ಮೌತ್ ಚೆನ್ನಾಗಿರುವುದರಿಂದ ಎರಡು ದಿನಗಳಿಂದ ಸಿನಿಮಾದ ಕಲೆಕ್ಷನ್ 7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಹಾಕಿದ್ದಾರೆ. ಮೊದಲನೇ ಹಾಗೂ ಎರಡನೇ ದಿನಗಳಿಗಿಂತ ಮೂರನೇ ದಿನ ಕಲೆಕ್ಷನ್ ಮತ್ತಷ್ಟು ಅದ್ಭುತ ಆಗಿರುತ್ತೆ ಎಂದು ಹೇಳಲಾಗುತ್ತಿದೆ.
ಮೂರನೇ ದಿನ ಹೇಗಿದೆ ರೆಸ್ಪಾನ್ಸ್?
ಮೂರನೇ ದಿನ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಕರ್ನಾಟಕದಲ್ಲಿ ಮತ್ತಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಕ್ಸ್‌ಪರ್ಟ್‌ಗಳ ಪ್ರಕಾರ, ‘ಸಪ್ತ ಸಾಗರದಾಚೆ ಎಲ್ಲೋ’ ಭಾನುವಾರ (ಸೆಪ್ಟೆಂಬರ್ 3) ಬೆಂಗಳೂರಿನಲ್ಲಿ ಸುಮಾರು 144 ಶೋಗಳಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಮೈಸೂರಿನಲ್ಲಿ 27 ಶೋಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಮೂರನೇ ದಿನ 4.5 ರಿಂದ 5 ಕೋಟಿ ರೂಪಾಯಿಗೂ ಕಲೆಕ್ಷನ್ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಮುಂದಿನ ವಾರದ ಪ್ರತಿಕ್ರಿಯೆ ಮುಖ್ಯ ಯಾವಾಗಲೂ ಹೊಸ ಸಿನಿಮಾಗಳಿಗೆ ಮೊದಲ ಮೂರು ದಿನ ಬೋನಸ್. ಸ್ಟಾರ್ ಸಿನಿಮಾಗಳು ಈ ಮೂರು ದಿನ ಚೆನ್ನಾಗಿಯೇ ಕಲೆಕ್ಷನ್ ಮಾಡುತ್ತವೆ. ಅದೇ ಸೋಮವಾರದಿಂದ ಶುಕ್ರವಾರದವರೆಗೆ ಕಲೆಕ್ಷನ್ ಅದ್ಭುತವಾಗಿದ್ದರೆ, ಸಿನಿಮಾ ಗೆದ್ದಂತೆ. ಸದ್ಯ ಮೊದಲ ಮೂರು ದಿನ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತೆ. ಅದೇ ಸೋಮವಾರದ ಬಳಿಕ ಕಲೆಕ್ಷನ್ ಸ್ಟಡಿಯಾಗಿ ಇದ್ದರೆ, ಸಿನಿಮಾ ಗೆದ್ದಂತೆ.