

31-8-23, ಅಥಣಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ಶ್ರೀ ಭರಮದೇವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಇಂದು ಸಾಯಂಕಾಲ ಜರುಗಿದ ಧರ್ಮ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ ಪುತ್ರರು, ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿಯವರು ಪಾಲ್ಗೊಂಡು ಮಾತನಾಡಿದರು…

ಕಾರ್ಯಕ್ರಮದಲ್ಲಿ ಕವಲಗುಡ್ಡ ಹಣಮಾಪುರದ ಶ್ರೀ ಅಮರೇಶ್ವರ ಮಹಾರಾಜರು, ಶ್ರೀ ಸುರೇಶ ಮಹಾರಾಜರು ಸಾನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಶಾಂತಿನಾಥ ನಂದೇಶ್ವರ, ಮುತ್ತಣ್ಣ ಕಾತ್ರಾಳ, ಶಿವು ಗುಮಟಿ, ಪುಷ್ಪಕ ಪಾಟೀಲ, ಸುರೇಶ ಇಚೇರಿ, ಲಕ್ಕಪ್ಪ ತೋಳಿ, ಹನಮಂತ ಇಚೇರಿ, ದಿಲೀಪ ಕಾಂಬಳೆ, ಮಾರುತಿ ಸನದಿ, ರಾವಸಾಬ ಹುಡೇದ, ಸಿದ್ದಣ್ಣ ಇಚೇರಿ, ಸಿದ್ದಪ್ಪ ಲೋಕುರ, ಮಹಾದೇವ ಕುಳ್ಳೊಳ್ಳಿ, ಬೀರಪ್ಪ ಲಾಯಾಗೋಳ ಸೇರಿದಂತೆ ಹಲವು ಗಣ್ಯಮಾನ್ಯರು, ಗ್ರಾಮದ ಗುರು ಹಿರಿಯರು, ಮುಖಂಡರು, ಗ್ರಾಮಸ್ಥರು, ಅಪಾರ ಭಕ್ತರು ಪಾಲ್ಗೊಂಡಿದ್ದರು.