

ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯ ಅಂಗವಾಗಿ ದಿನಾಂಕ 29-08-2023 ರಂದು ಅಮೃತ ವಿದ್ಯಾಲಯಂ ಶಾಲೆಯಲ್ಲಿ ಇಂಟರ್ ಸ್ಕೂಲ್ ಹಬ್ ಲೆವೆಲ್ ಚೆಸ್ ಟೂರ್ನಮೆಂಟ್ ನ್ನು(ಅಂತರ್ ಶಾಲಾ ಮಟ್ಟದ ಚದುರಂಗ ಸ್ಪರ್ಧೆ) ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀಯುತ ವೆಂಕಟೇಶ್ ಎಂ.ವಿ ಇವರು ಆಗಮಿಸಿದ್ದರು. ಅತಿಥಿಗಳನ್ನು ಅಮೃತ ವಿದ್ಯಾಲಯಂ ಶಾಲೆಯ ವಿದ್ಯಾರ್ಥಿನಿಯರು ತಿಲಕವಿಟ್ಟು ವೇದ ಘೋಷಗಳ ಮೂಲಕ ಸ್ವಾಗತಿಸಿದರು. ಶ್ರೀಯುತರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕ್ರೀಡೆ ಪೂರಕವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.3
ಶ್ರೀಯುತ ದಿನೇಶ್ .ಕೆ .ಶೆಟ್ಟಿ ಅಧ್ಯಕ್ಷರು ದಾವಣಗೆರೆ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಅಸೋಸಿಯೇಷನ್ ಇವರು ಅತಿಥಿಗಳಾಗಿ ಆಗಮಿಸಿ ಜಗತ್ತು ಸ್ಪರ್ಧಾತ್ಮಕವಾಗಿದೆ, ಚದುರಂಗದಾಟವು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜೀವನಕ್ಕೆ ಅಣಿಗೊಳಿಸಲು ಸಹಾಯಕವಾಗಿದೆ ಮಕ್ಕಳ ಬೌದ್ಧಿಕ ಶಕ್ತಿ ಬೆಳವಣಿಗೆ ಹಾಗೂ ಜೀವನದ ಹಾಗೂ ಹೋಗುಗಳು ಎದುರಿಸಲು ಚದುರಂಗ ಸಹಕಾರಿಯಾಗುತ್ತದೆ ಚದುರಂಗದಾಟವು ಸಾವಿರಾರು ವರ್ಷಗಳಿಂದ ಪೂರ್ವಜರು ಹಾಡಿಕೊಂಡು ಬರುತ್ತಿದ್ದು ಇಂತಹ ಕ್ರೀಡೆಗಳು ಇನ್ನು ಉನ್ನತ ಮಟ್ಟಕ್ಕೆ ಪ್ರೋತ್ಸಾಹ ಸಿಕ್ಕು ಮಕ್ಕಳು ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನು ಆಡಿದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ಯುವರಾಜ್ .ಟಿ .ಹಾಗೂ ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ. ಎನ್ ಉಪ ಪ್ರಾಂಶುಪಾಲರಾದ ಶ್ರೀಯುತ ಪ್ರತೀಕ್ ಶೆಟ್ಟಿ ಹಾಗೂ ಅಮೃತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಎನ್ .ಸಿ .ವಿವೇಕ್ ಮತ್ತು ಅಮೃತ ವಿದ್ಯಾಲಯಂ ಶಾಲೆಯ ಆಡಳಿತಾಧಿಕಾರಿಯಾದ ಶ್ರೀಯುತ ನಂದೀಶ್ ರಾವ್ ಪುತ್ಲಿ, ಶಾಲೆಯ ಫಿಸಿಕಲ್ ಡೈರೆಕ್ಟರ್ಗಳಾದ ಕುಮಾರಸ್ವಾಮಿ ಮೇಘರಾಜ್ ಸಂತೋಷ್ ಕುಮಾರ್ , ಹೇಮಂತ್ ಶ್ವೇತಾ ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ನಡೆಸಿಕೊಟ್ಟರು. 18 ವಿವಿಧ CBSE ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.