ಚುನಾವಣೆಗೂ ಮುನ್ನ ಟಿ.ಎಂ.ಸಿ ನಾಯಕ ಅಭಿಷೇಕ್ ಬಂಧನಕ್ಕೆ ಕೇಂದ್ರದ ಯತ್ನ: ಮಮತಾ ಬ್ಯಾನರ್ಜಿ

(ಆ 29).. 2024ರ ಲೋಕಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ನ ನಾಯಕ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಂಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ ಕೋಲ್ಕತ್ತದಲ್ಲಿ ಟಿಎಂಸಿ ಯುವ ಘಟಕದ ರಾಲಿಯಲ್ಲಿ ಮಾತನಾಡಿದ ಅವರು, ”ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ. ನಾನು ಕೇಂದ್ರದಲ್ಲಿ ಇಂತಹ ಸೇಡಿನ ಸರ್ಕಾರವನ್ನು ಇದುವರೆಗೆ ನೋಡಿಲ್ಲ, ಇ.ಡಿ ದಾಳಿಗೆ ಸಂಬಂಧಿಸಿ ಲೋಕಸಭೆ ಚುನಾವಣೆಗೂ ಮುನ್ನ ಅಭಿಷೇಕ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವ್ಯಕ್ತಿಯೊಬ್ಬರು ನನಗೆ ಸಂದೇಶ ರವಾನಿಸಿದ್ದಾರೆ ಎಂದು ಮಮತಾ ಹೇಳಿದ್ದಾರೆ.

ಬಿಜೆಪಿಯು ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು. ಚುನಾವಣೆಯಲ್ಲಿ ಪ್ರಚಾರ ಮಾಡಲು ಬಿಜೆಪಿ ಈಗಾಗಲೇ ಎಲ್ಲಾ ಚಾಪರ್‌ಗಳನ್ನು ಕಾಯ್ದಿರಿಸಿದೆ. ಯಾವುದೇ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಅವುಗಳನ್ನು ಬಳಸಬಾರದು ಎಂಬ ಉದ್ದೇಶ ಅವರಲ್ಲಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಭಾರತದಲ್ಲಿ ಬಿಜೆಪಿಗೆ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ದೇಶವು ಸರ್ವಾಧಿಕಾರಿ ಆಡಳಿತವನ್ನು ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸತತ ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶವು ನಿರಂಕುಶ ಆಡಳಿತವನ್ನು ಎದುರಿಸಬೇಕಾಗುತ್ತದೆ. ಅವರು (ಬಿಜೆಪಿ) ಡಿಸೆಂಬರ್ 2023 ರಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂಬ ಆತಂಕ ನನ್ನಲ್ಲಿದೆ” ಎಂದು ಹೇಳಿದ್ದಾರೆ. ಕೇಸರಿ ಪಕ್ಷವು ಈಗಾಗಲೇ ನಮ್ಮ ದೇಶದಲ್ಲಿ ಸಮೂಹಗಳ ನಡುವೆ ಒಡುಕು ಉಂಟು ಮಾಡಿದೆ. ವೈರತ್ವದ ರಾಷ್ಟ್ರವನ್ನಾಗಿ ಪರಿವರ್ತಿಸಿದೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ, ನಮ್ಮ ದೇಶವನ್ನು ದ್ವೇಷದ ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಬಂಗಾಳದಲ್ಲಿ ಮೂರು ದಶಕ ಆಡಳಿತ ನಡೆಸಿದ ಸಿಪಿಎಂ ಅನ್ನು ಟಿಎಂಸಿ ಮಣಿಸಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಮಮತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಎಂದು ಅವರು ತಿಳಿಸಿದ್ದಾರೆ.

  • Related Posts

    ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ, ಮುಂದೆಯೂ ಸ್ಪರ್ಧಿಸುವುದಿಲ್ಲ: ಅಮಿತ್ ಶಾ

    ಹಿಂದಿ ದಿವಸ್‌ ನಿಮಿತ್ತ, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭಾಷಾ ವೈವಿಧ್ಯತೆಗೆ ಹೆಸರುವಾಸಿಯಾದ ರಾಷ್ಟ್ರದಲ್ಲಿ ಹಿಂದಿಯ ಏಕೀಕರಣದ ಪಾತ್ರವನ್ನು ಎತ್ತಿ ತೋರಿಸಿದರು. ನಾಗರಿಕರಿಗೆ ನೀಡಿದ ಸಂದೇಶದಲ್ಲಿ, ಹಿಂದಿ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ ಮತ್ತು…

    ಭಾರತದ ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬೇಕು ,,,”ಬಿಜೆಪಿ ನಾಯಕ ದಿಲೀಪ್ ಘೋಷ್”

    ಇಂಡಿಯಾ (India) ಎಂಬ ಹೆಸರನ್ನು ಭಾರತ (Bharatha) ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ಯಾರೆಲ್ಲ ವಿರೋಧಿಸುತ್ತಾರೋ ಅಥವಾ ಯಾರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ ಅವರೆಲ್ಲಾ ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ತಿಳಿಸಿದ್ದಾರೆ. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಖಾರಗ್ಪುರ…

    Leave a Reply

    Your email address will not be published. Required fields are marked *

    error: Content is protected !!