

ಉತ್ತರಪ್ರದೇಶದಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯಲು ಸಹಪಾಠಿಗಳಿಗೆ ಸೂಚಿಸಿದ ಘಟನೆಯ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರತಿಕ್ರಿಯಿಸಿದ್ದು, ಇದು ಸಂಘಪರಿವಾರದ ಅಪಾಯಕಾರಿ ಕೋಮು ಪ್ರಚಾರದ ಅಪಾಯವನ್ನು ಎತ್ತಿತೋರಿಸುತ್ತದೆ. ಇದು ಅಲ್ಪಸಂಖ್ಯಾತರು ಮತ್ತು ದಲಿತರನ್ನು ಅಮಾನವೀಯವಾಗಿಸಲು ಮತ್ತು ಅವರನ್ನು ಪ್ರಾಣಿಗಳಿಗಿಂತ ಕೆಟ್ಟ ಸಾಮಾಜಿಕ ಸ್ಥಾನಮಾನಕ್ಕೆ ಇಳಿಸುವ ಪ್ರಯತ್ನವಾಗಿದೆ. ಈ ಕೋಮು ಪ್ರಚಾರ ವ್ಯಕ್ತಿಯನ್ನು ಎಷ್ಟು ರಾಕ್ಷಸರನ್ನಾಗಿ ಮಾಡುತ್ತದೆ ಎಂಬುದನ್ನು ಘಟನೆ ಒತ್ತಿಹೇಳುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಸಿಎಂ ಪಿಣರಾಯ್ ವಿಜಯನ್, ಕೋಮುವಾದವು ಅತ್ಯಂತ ಕೆಟ್ಟ ಮನಸ್ಥಿತಿಯಾಗಿದೆ. ಅದು ಅವನನ್ನು ಕೀಳುಮಟ್ಟಕ್ಕೆ ತರಬಹುದು. ಸಂಘಪರಿವಾರದ ಸಿದ್ಧಾಂತದ ವಿರುದ್ಧ ನಾವು ಪ್ರಬಲವಾದ ಬೇಲಿ ಕಟ್ಟಬೇಕು . ಈ ವಿಚಾರದಲ್ಲಿ ಜಾತ್ಯಾತೀತತೆಯ ಜನರು ಜವಾಬ್ಧಾರಿ ಅರಿತು ಒಂದಾಗಬೇಕು ಎಂದು ಹೇಳಿದ್ದಾರೆ, ಕೋಮುವಾದ ಮತ್ತು ಫ್ಯಾಸಿಸಂ ಮನುಷ್ಯನ ಕೊನೆಯ ಹನಿಯ ಪ್ರೀತಿಯನ್ನು ಕೂಡ ಹೀರಬಲ್ಲವು ಎಂಬುದನ್ನು ಈ ಘಟನೆ ನಮಗೆ ನೆನಪಿಸುತ್ತದೆ ಎಂದು ಅವರು ಹೇಳಿದರು.

ಆ ಶಿಕ್ಷಕಿಗೆ ಎಷ್ಟು ಕೋಮು ವಿಷವು ಆವರಿಸಿರಬಹುದು? ಏಳು ವರ್ಷದ ಬಾಲಕನನ್ನು ಆತನ ಧರ್ಮದ ಕಾರಣಕ್ಕೆ ಮಾತ್ರ ಶಿಕ್ಷಿಸಿಲ್ಲ. ಅನ್ಯ ಧರ್ಮದ ವಿದ್ಯಾರ್ಥಿಗಳಿಗೆ ಆತನಿಗೆ ಶಿಕ್ಷೆಯನ್ನು ಕೊಡುವಂತೆ ಕೇಳಲಾಗಿದೆ ಎಂದು ಅವರು ಹೇಳಿದರು. ಮುಜಾಫರ್‌ನಗರದಲ್ಲಿ ನಡೆದ ಘಟನೆ ಮೊದಲಲ್ಲ, ಪ್ರಜಾಪ್ರಭುತ್ವದ ಶ್ರೇಷ್ಠ ಉದಾಹರಣೆಯಾಗಿರುವ ಭಾರತವನ್ನು ದ್ವೇಷದ ನೆಲವನ್ನಾಗಿ ಪರಿವರ್ತಿಸಲು ಹಿಂದುತ್ವ ಕೋಮುವಾದ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಮಣಿಪುರದ ವರದಿಗಳು ಅದನ್ನು ಸಮರ್ಥಿಸುತ್ತವೆ ಎಂದು ಕೇರಳ ಸಿಎಂ ಪಿಣರಾಯ್ ವಿಜಯನ್ ಸಂಘಪರಿವಾರದ ವಿರುದ್ಧ ಟೀಕಿಸಿದ್ದಾರೆ.