2.85 ಕೋಟಿ ರೂ ಲಾಭ ಗಳಿಸಿದ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್

ಆರ್.ಬಿ.ಐನಿಂದ ಅತ್ಯುತ್ತಮ ಬ್ಯಾಂಕ್‌ ಸ್ಥಾನಮಾನ : ವೃತ್ತಿ ಶಿಕ್ಷಣ ಕೋರ್ಸ್‌ ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ

ಬೆಂಗಳೂರು, ಆ, 28; ಸೌಹಾರ್ದ ಸಹಕಾರಿ ಕ್ಷೇತ್ರದ ಪ್ರಮುಖ ಬ್ಯಾಂಕ್‌ ಆಗಿರುವ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್‌ ಗೆ ಆರ್.ಬಿ.ಐ ಅತ್ಯುತ್ತಮ ಸ್ಥಾನ ಮಾನ ನೀಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 2.85 ಕೋಟಿ ರೂ ಲಾಭ ಗಳಿಸಿದೆ.

ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಬ್ಯಾಂಕ್‌ ಗಳು ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿರುವ ಸಂದರ್ಭದಲ್ಲೇ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್‌ ತನ್ನ ದಕ್ಷತೆ, ಆರ್ಥಿಕ ಶಿಸ್ತು, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಯಶಸ್ಸಿನತ್ತ ದಾಪುಗಾಲಿಡುತ್ತಿದೆ.

27 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಬ್ಯಾಂಕ್‌ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಬಿ.ವಿ. ದ್ವಾರಕಾನಾಥ್‌, ಬ್ಯಾಂಕ್‌ ನಲ್ಲಿ ಏಳು ಸಾವಿರ ಸದಸ್ಯರಿದ್ದು, ಈ ವರ್ಷ ೫೦೦ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಬ್ಯಾಂಕ್‌ ಲಾಭದತ್ತ ಮುನ್ನಡೆದಿದೆ. ಒಟ್ಟಾರೆ 2.85, ೨೩, ೪೩೭ರೂಪಾಯಿ ಲಾಭಗಳಿಸಿದೆ. ಆರ್.ಬಿ.ಐ ಕೂಡ ನಮ್ಮ ಬ್ಯಾಂಕ್‌ ಗೆ ಅತ್ಯುತ್ತಮ ಸ್ಥಾನಮಾನ ನೀಡಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇನ್ನು ವೈದ್ಯಕೀಯ, ವೃತ್ತಿಪರ ಕೋರ್ಸ್‌ ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಗೌರವ ಸಲ್ಲಿಸಲಾಗುವುದು ಎಂದರು.

ಗ್ರಾಹಕರಾದ ಬಿ.ಕೆ. ಶ್ರೀನಿವಾಸ [ ನಿರ್ಮಾಪಕ, ಬೆಂಕೋಶ್ರೀ] ಮಾತನಾಡಿ, ತಾವು ೧೫ ವರ್ಷಗಳಿಂದ ಸದಸ್ಯರಾಗಿದ್ದು, ಗ್ರಾಹಕರ ಆಶಯಗಳಿಗೆ ತಕ್ಕಂತೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಯ ದಕ್ಷತೆ ಕೂಡ ಬ್ಯಾಂಕ್‌ ಯಶಸ್ಸಿಗೆ ಕಾರಣವಾಗಿದೆ ಎಂದರು.

  • Related Posts

    ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮದ ಅರಿವು ಮೂಡಿಸಿ ಅಪಘಾತ ತಪ್ಪಿಸಿ : ಜಿ.ಜಗದೀಶ್

    ಬೆಂಗಳೂರು ನಗರ ಜಿಲ್ಲೆ, ಜನವರಿ 31 ಬೆಂಗಳೂರು ನಗರದಲ್ಲಿ ಅತಿ ವೇಗದ ವಾಹನ ಚಾಲನೆಯಿಂದಾಗಿ ಅಪಘಾತ ಹೆಚ್ಚಾಗುತಿರುವ ಕಾರಣ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಅರಿವು ಮೂಡಿಸಿ ಎಂದು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ…

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಸಭೆ

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು…

    Leave a Reply

    Your email address will not be published. Required fields are marked *

    error: Content is protected !!